Image by Gerd Altmann from Pixabay 

ವೈಚಾರಿಕತೆ ಎಂಬುದು ವ್ಯಕ್ತಿ ಯಾವುದೇ ವಿಷಯ, ಸಂಗತಿ ,ಸಂದರ್ಭ ಇತ್ಯಾದಿಗಳನ್ನು ಕೂಲಂಕುಶವಾಗಿ ವಿಚಾರಿಸಿ ಅದನ್ನು ಒಪ್ಪಿಕೊಳ್ಳುವುದು. ಮತ್ತು ಪರರಿಗೂ ಅರಿವು ಮೂಡಿಸುವುದು. ವಿಷಯದ ಹಿನ್ನೆಲೆ ಸತ್ಯತ ಮತ್ತು ವೈಜ್ಞಾನಿಕ ಸತ್ಯತೆಯನ್ನು ಮನಗಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ದೇವಸ್ಥಾನದಲ್ಲಿ ಮೆಟ್ಟಿಲುಗಳನ್ನು ಹತ್ತಿ ಒಳಗಡೆ ಹೋಗಬೇಕು ಇದರ ಹಿನ್ನೆಲೆ ಒಂದು ಬಡವ-ಶ್ರೀಮಂತ ಜಾತಿಭೇದವಿಲ್ಲದೆ ದೇವರ ಮುಂದೆ ತಲೆಬಾಗಿ ಹೋಗುವುದು ಮತ್ತು ಇಲ್ಲಿ ನಾವು ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು. ವೈಜ್ಞಾನಿಕವಾಗಿ ನೋಡುವುದಾದರೆ ಮೆಟ್ಟಿಲುಗಳನ್ನು ಹತ್ತುವುದರಿಂದ ನರನಾಡಿಗಳ ರಕ್ತಪರಿಚಲನೆ ಯಾಗುವುದು. ದೇವರ ಗುಡಿಯಲ್ಲಿರುವ ಗಂಟೆ. ಬಾರಿಸುವುದರಿಂದ ಏಕಾಗ್ರತೆ ಉದ್ಭವಾಗುವುದು.

ಅದೇ ರೀತಿಯಾಗಿ ದೇವರ ಹೆಸರಿನಲ್ಲಿ ಹೋಮ ,ಹವನ ಮಾಡುವುದರ ಹಿನ್ನೆಲೆ ಗುರುತಿಸಿಕೊಳ್ಳಬೇಕು ಹವನದಲ್ಲಿ ಉಪಯೋಗಿಸುವ ಹಲವಾರು ಗಿಡಮೂಲಿಕೆಗಳು ಬೆಂಕಿಯಲ್ಲಿ ಸುಟ್ಟು ವಾತಾವರಣದಲ್ಲಿ ಹೋಗಿ ಗಾಳಿಯನ್ನು ಶುದ್ಧ ಮಾಡುವುದು .

ದೇವರಿಗೆ ಅಭಿಷೇಕ ಮಾಡುವುದರಿಂದ ಅದರಲ್ಲಿಯ ಪಂಚಾಮೃತವನ್ನು ಬಡಜನರಿಗೆ ಕೂಡ ಲಭಿಸಲೆಂದು ಅದರಲ್ಲಿರುವ ಪಂಚಭೂತಗಳು ನೀರು, ತುಪ್ಪ ,ಬಾಳೆಹಣ್ಣು,ಸಕ್ಕರೆ ಜೇನುತುಪ್ಪ , ಗೋಮೂತ್ರ ಇತ್ಯಾದಿಗಳು ಮಿಶ್ರಣದಿಂದ ಎಲ್ಲರ ದೇಹ ಸೇರಲೆಂದು.

ಹೀಗೆ ದೇವರ ಗುಡಿಯ ಕಳಸಾರೋಹಣ ಇರೋದು ಅದು ತಾಮ್ರದಿಂದ ಮಾಡಿರುವುದು, ಇದರ ವೈಜ್ಞಾನಿಕ ಹಿನ್ನೆಲೆ ಸೂರ್ಯನಿಂದ ನೇರವಾಗಿ ಬರುವ ಕಿರಣಗಳು ಪರಿಸರದಲ್ಲಿರುವ ಜೀವಜಂತುಗಳ ರಕ್ಷಣೆಗೆಂದೇ ಹೀಗೆ ಹತ್ತು ಹಲವು ವಿಷಯಗಳು ಮೂಢನಂಬಿಕೆ ಗಳಿಲ್ಲದೆ ಒಪ್ಪಿಕೊಳ್ಳಬೇಕು ದೇವರ ಹೆಸರಿನಲ್ಲಿ ಅತಿಯಾಗಿ ಮಾಡಿ ಹೊಟ್ಟೆತುಂಬಿಸುವ ಕೊಳ್ಳುವವರನ್ನು ನಂಬದೇ ವೈಜ್ಞಾನಿಕವಾಗಿ ಆಚರಣೆ ಮಾಡುವವರನ್ನು ದೈವಭಕ್ತಿಯಿಂದ ಒಪ್ಪಿಕೊಳ್ಳಿ .

ಹೀಗೆ ನಾವು ಮಕ್ಕಳಲ್ಲಿ ಕೂಡ ಯಾವುದೇ ವಿಷಯದ ಕುರಿತು ವೈಜ್ಞಾನಿಕವಾಗಿ ವಿಚಾರಿಸುವಂತೆ ರನ್ನಾಗಿ ಮಾಡಿ ವೈಚಾರಿಕತೆಯ ಮನೋಭಾವನೆಯನ್ನು ಬೆಳೆಸಬೇಕು. ಮೊದಲು ನಾವು ನಮ್ಮ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಶರಣರ ವಚನಗಳಲ್ಲಿ ವೈಚಾರಿಕತೆ ಅನ್ನೋದು ವಿವರವಾಗಿ ತಿಳಿಸಿದ್ದಾರೆ.

.    .    .

Discus