Image by Rinki Lohia from Pixabay 

ಭಾರತವು ಮೊದಲಿನಿಂದಲೂ ಶಿಲ್ಪಕಲೆಗೆ ಜಗತ್ತಿನಲ್ಲೆ ಅತಿ ಹೆಚ್ಚು ಪ್ರಸಿದ್ಧಿ ಪಡೆದ ದೇಶವಾಗಿದೆ. ಯಾವುದೆ ರೀತಿಯ ಆಧುನಿಕ ಉಪಕರಣಗಳಿಲ್ಲದೆಯೆ ಅತ್ಯಂತ ನೈಪುಣ್ಯತೆಯಿಂದ, ಸೂಕ್ಷ್ಮತೆಗಳನ್ನೂ ಸಹ ಹೊಂದಿರುವ ಕರಾರುವಕ್ಕಾದ ಅದ್ಭುತ ಶಿಲ್ಪಕಲಾಕೃತಿಗಳು ಇಂದು ದೇಶದ ಸಾಕಷ್ಟು ಐತಿಹಾಸಿಕ ದೇವಾಲಯ ರಚನೆಗಳಲ್ಲಿ ಕಾಣಬಹುದಾಗಿದೆ.

ಭಾರತದ ಮಧ್ಯಪ್ರದೇಶದ ಚತಾರ್ಪುರ್ ಜಿಲ್ಲೆಯಲ್ಲಿರುವ, ಖಜುರಾಹೊ ಸ್ಮಾರಕಗಳು ಮಧ್ಯಯುಗ ಭಾರತದ ಹಿಂದೂ ಮತ್ತು ಜೈನ ದೇವಸ್ಥಾನಗಳನ್ನು ಹೊಂದಿದೆ. ದೇವಾಲಯಗಳು ಖಜುರಾಹೊ, ಯುನೆಸ್ಕೋ ವಿಶ್ವ ಪರಂಪರೆಯ ನಿಧಿಯಲ್ಲಿ ಕೆತ್ತಲಾಗಿದೆ, ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದು ಎಂದು ಪರಿಗಣಿಸಲಾಗಿದೆ. ಅವರು ಭಾರತೀಯ ವಾಸ್ತುಶಿಲ್ಪದ ಶೈಲಿಗಳಿಗೆ ಒಂದು ಸುಂದರವಾದ ಉದಾಹರಣೆಯಾಗಿದ್ದಾರೆ ಮತ್ತು ಮಧ್ಯಯುಗದಲ್ಲಿ ಸಾಂಪ್ರದಾಯಿಕ ಪ್ರೀತಿಯ ಜೀವನ ವಿಧಾನಗಳನ್ನು ಅವರು ನಿರರ್ಗಳವಾಗಿ ಚಿತ್ರಿಸಿದ್ದರಿಂದ ಬಹಳ ಜನಪ್ರಿಯರಾಗಿದ್ದಾರೆ.

  • ಖಜುರಾಹೋ ಹೆಸರು : 

ಇಡೀ ಕೋಟೆಗೆ ಎಂಟು ದಿಕ್ಕಿನಲ್ಲಿಯೂ ದ್ವಾರಗಳು ಆ ದ್ವಾರಗಳ ಇಕ್ಕೆಲದಲ್ಲಿಯೂ ಸಹ ವಿಸ್ತಾರವಾಗಿ ಹರಡಿದ್ದ ಖರ್ಜೂರದ ಮರಗಳು ಇಡೀ ಪ್ರದೇಶ ಸಿಹಿಯ ಸವಿಯನ್ನೇ ಉಣಬಡಿಸುವಂತೆ ಭಾಸವಾಗುತ್ತಿತ್ತು. ಆ ಖರ್ಜೂರದ ಮರಗಳ ಕಾರಣದಿಂದಲೇ ಅದನ್ನು ಖಜುರಾಹೋ ಎಂದು ಕರೆಯುತ್ತಿದ್ದರು ಎನ್ನುವುದಾಗಿ ಶಾಸನವೊಂದರಲ್ಲಿ ಕಂಡುಬರುತ್ತದೆ. ಹೌದು ಶಕವರ್ಷ 950 ರಿಂದ 1050 ರ ವರೆಗೆ ಆಳಿದ ಚಂಡೇಲ ವಂಶದ ಅರಸರು ಖಜುರಾಹೋವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.

  • ಚಂಡೆಲರ ಇತಿಹಾಸ:

ಸುಮಾರು 9ನೆಯ ಶತಮಾನದಲ್ಲಿ ಪ್ರತೀಹಾರ ವಂಶಸ್ಥರ ಆಳ್ವಿಕೆಯ ನಂತರ ಉತ್ತರ ಭಾರತದ ಮಧ್ಯಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಒಂದು ರಾಜಮನೆತನದವರು ಎಂದರೆ ಚಂಡೇಲರು. 36ಪ್ರಸಿದ್ಧರಾಜವಂಶಗಳಲ್ಲಿ ಚಂಡೇಲರದೂ ಒಂದು ಎನ್ನುವುದಾಗಿ ಆ ವಂಶಸ್ಥರ ಆಸ್ಥಾನ ಕವಿಗಳು ಹೇಳಿದ್ದಾರೆ. ಅವರ ಅತಿಪ್ರಾಚೀನವೆನಿಸಿದ 954 ನೇ ಇಸವಿಯ ಶಾಸನದಲ್ಲಿ ಈ ಅರಸರು ಚಂದ್ರಾತ್ರೇಯ ವಂಶದವರೆಂದು ಬಣ್ಣಿಸಿದೆ. ಸು.1098ರ ಕೀರ್ತಿವರ್ಮನ ದೇವಗಢದ ಶಾಸನ ಒಂದರಲ್ಲಿ ಚಂದೆಲ್ಲ ಎಂಬ ಹೆಸರೂ ಸಹ ಕಾಣಸಿಗುತ್ತದೆ. ಚಂಡೇಲರ ಆಳ್ವಿಕೆಗೆ ಒಳಪಟ್ಟ ಪ್ರದೇಶವನ್ನು ಜೇಜಭುಕ್ತಿ, ಜೇಜಕಭುಕ್ತಿ, ಜೇಜಕಭುಕ್ತಿ ಮಂಡಲ ಎಂಬ ಮೂರು ಹೆಸರುಗಳಲ್ಲಿ ಶಾಸನಗಳಲ್ಲಿ ಹೇಳಲಾಗಿದೆ. ಇದು ಕ್ರಮೇಣ ಅನಂತರ ಬುಂದೇಲ್ಖಂಡವೆನಿಸಿಕೊಂಡಿತು. 10ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ಇವರ ಈ ರಾಜ್ಯ ಖಜುರಾಹೊ, ಕೌಲಂಜರ, ಮಹೊಬಾ ಹಾಗೂ ಅಜಯಗಢಗಳನ್ನೊಳಗೊಂಡಿತ್ತು. ಸು. 9ನೆಯ ಶತಮಾನದ ಮೊದಲಾರ್ಧಭಾಗದಲ್ಲಿ ನನ್ನುಕ ಚಂಡೇಲನೆಂಬವನು ಖಜುರಾಹೊ ಎಂಬಲ್ಲಿ ಚಂಡೇಲರಾಜ್ಯದ ಸ್ಥಾಪನೆ ಮಾಡಿದ. ಚಂದ್ರವರ್ಮನೆಂಬ ಬಿರುದನ್ನು ಹೊಂದಿದ್ದ ಈತ ಪ್ರತೀಹಾರನಾಗಭಟನ ಸಾಮಂತನಾಗಿ ರಾಜ್ಯಭಾರ ಮಾಡಿದ. ಈತನ ಅನಂತರ ಅಧಿಕಾರಕ್ಕೆ ಬಂದವರು ವಾಸ್ಪತಿರಾಜ, ಮತ್ತು ಆತನ ಇಬ್ಬರು ಮಕ್ಕಳಾದ ಜಯಶಕ್ತಿ ಮತ್ತು ವಿಜಯಶಕ್ತಿ , ವಿಜಯಶಕ್ತಿಯ ಮಗ ರಾಹಿಲ ಇವರು ಪ್ರತೀಹಾರರಿಗೆ ಸಾಮಂತರಾಗಿ ಆಳುತ್ತಿದ್ದರು. ರಾಹಿಲನ ಮಗನೇ ಹರ್ಷ. ಸುಮಾರು 900 ರಿಂದ 925 ತನಕ ರಾಜ್ಯವಾಳಿದ ಹರ್ಷನ ಕಾಲದಲ್ಲಿ ಚಂಡೇಲ ರಾಜ್ಯವು ಮಹಾನ್ ಶಕ್ತಿಯಾಗಿ ಬೆಳೆಯಿತು. ಅದೇ ಕಾಲದಲ್ಲಿ ರಾಷ್ಟ್ರಕೂಟರ ೩ ನೆಯ ಇಂದ್ರನಿಂದ ಸ್ಥಾನ ಪಲ್ಲಟಗೊಂಡು ಸ್ಥಾನಚ್ಯುತನಾದ ಪ್ರತೀಹಾರವಂಶದ ಮಹೀಪಾಲ ತನ್ನ ಸಿಂಹಾಸನವನ್ನು ಪುನಃ ಪಡೆದುಕೊಳ್ಳಲು ಚಂಡೇಲರ ಹರ್ಷ ಸಹಾಯ ಮಾಡಿದ. ಹರ್ಷನ ಮಗನೇ ಯಶೋವರ್ಮ. ಈತನ ಕಾಲದಲ್ಲಿ ಪ್ರತೀಹಾರರು ತಮ್ಮೆಲ್ಲ ಶಕ್ತಿಯನ್ನೂ ಕಳೆದುಕೊಂಡು ಹೆಸರಿಗೆ ಮಾತ್ರ ಅರಸರಾಗಿ ಉಳಿದಿದ್ದರು. ಇದೇ ಸಮಯದಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲು ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಿಂದ ಇನ್ನೊಮ್ಮೆ ಪ್ರತೀಹಾರ ರಾಜ್ಯವನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಯಶೋವರ್ಮನು ಕಾಲಂಜರ ಮುಂತಾದ ಕೋಟೆಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡ. ಇದಲ್ಲದೆ ಈತ ಕಲಚುರಿವಂಶದ ಯುವರಾಜದೇವನನ್ನು, ಪರಮಾರ ಮನೆತನದ ಸೀಯಕನನ್ನು ಮತ್ತು ಬಂಗಾಲದ ಪಾಲಮನೆತನದ ವಿಗ್ರಹಪಾಲನನ್ನು ಸೋಲಿಸಿ ತನ್ನ ಕೀರ್ತಿಯನ್ನು ಇಮ್ಮಡಿಗೊಳಿಸಿಕೊಂಡ. 

  • ಖಜರಾಹೋ ದೇವಾಲಯದ ಶಾಸನ:-

ಯಶೋವರ್ಮ ಒಬ್ಬ ದಕ್ಷ ಸೇನಾಪತಿಯಾಗಿದ್ದಂತೆ ದೈವಭಕ್ತನೂ ಆಗಿದ್ದ. ಇವನ ಕಾಲದಲ್ಲಿ ಕಟ್ಟಲು ಆರಂಭಿಸಲಾದ ಖಜುರಾಹೋದ ಚತುರ್ಭುಜದೇವಾಲಯ ಈತನ ನಂತರದ ಧಂಗನ ಆಳ್ವಿಕೆಯ ಕಾಲದಲ್ಲಿ ಪೂರ್ಣಗೊಂಡಿತು. ಈತನ ಕಾಲದಲ್ಲಿದ್ದ ಮಾಧವ ಎನ್ನುವವನು ಸಂಸ್ಕೃತದ ದೊಡ್ಡ ಕವಿಯಾಗಿದ್ದ. ಈತನಿಗೆ ಪ್ರಶಸ್ತಿಯನ್ನು ನೀಡಿರುವುದರ ಕುರಿತಾಗಿ ಆತ ಖಜರಾಹೋದ ದೇವಾಲಯದ ಶಾಸನದಲ್ಲಿ ಈ ರೀತಿಯಾಗಿ -

 "ಯಸ್ಸಾಗ ವಿಕ್ರಮ ವಿವೇಕ ಕಲಾ ವಿಲಾಸ ಪ್ರಜ್ಞಾಪ್ರತಾಪ ವಿಭವ ಪ್ರಭವಶ್ಚರಿತ್ರಾತ್ ಚಕ್ರೇ ಕೃತೀ
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ ಶಬ್ದಾನುಶಾಸನ ವಿದಾಪಿತ್ರಮಾನ್ಯ ದತ್ತ
ದದ್ದೇನ ಮಾದವ ಕವಿಃ ಸ ಇಮಾಂ ಪ್ರಶಸ್ತಿಂ
ಯಸ್ಯಾಮಲಂ ಕವಿ ಯಶಃ ಕೃತಿನಃ ಕಯಾಸು ರೋಮಾಂಚ ಕಂಚಕ ಜುಷಃ ಪರಿಕೀರ್ತಯನ್ತೀ
ಸಂಸ್ಕೃತ ಭಾಷಾ ವಿದುಷಾ ಜಯಗುಣ ಪುತ್ರೇಣ ಕೌತುಕಾ ಲಿಖಿತಾ"

ರುಚಿರಾಕ್ಷರಾ ಪ್ರಶಸ್ತಿಃ ಕರಣಿಕ ಜದ್ದೇನ ಗೌಡನ

ಎನ್ನುವುದಾಗಿ ಶಾಸನವನ್ನು ಹಾಕಿಸುತ್ತಾನೆ.

ಯಶೋವರ್ಮನ ಕಾಲದಲ್ಲಿದ್ದ ಮಾಧವನೆನ್ನುವ ಸಂಸ್ಕೃತ ಕವಿಗೆ  ದೆದ್ದನೆನ್ನುವವನು ಪ್ರಶಸ್ತಿಯನ್ನು ನೀಡಿದ ಕುರಿತು ಈ ದೇವಾಲಯದಲ್ಲಿರುವ ಶಾಸನ ಒಂದರಲ್ಲಿ ಹೇಳಲಾಗಿದೆ. ಅತ್ಯಂತ ಸುಂದರವಾದ ಪದಗಳನ್ನು ಪೋಣಿಸಿ ರಚಿಸಿದ ಈ ಶಾಸನ ಸಾಹಿತ್ಯಾಸಕ್ತರಿಗೆ ಅತ್ಯಂತ ಮಹತ್ವದ್ದು , ಇಲ್ಲಿ ಇನ್ನೊಂದು ಮುಖ್ಯ ವಿಶೇಷವೆಂದರೆ ಸಂಸ್ಕೃತ ಭಾಷೆಯನ್ನು ಕುರಿತು ಕವಿ ಜಯಗಣನ ಮಗನನ್ನು ಸಂಸ್ಕೃತಭಾಷಾ ವಿದುಷ ಎಂದು ಬಣ್ಣಿಸಿದ್ದಾರೆ. ಒಂದು ಭಾಷೆಯ ಕುರಿತು ಅಭಿಮಾನದಿಂದ ಹೇಳಿರುವುದು ಶಾಸನ ಇತಿಹಾಸದಲ್ಲಿ ತುಂಬಾ ವಿರಳ. ಖಂಡರಿಸಿರುವ ಅಕ್ಷರವನ್ನು ಕುರಿತಾಗಿಯೂ ಸಹ 'ರುಚಿರಾಕ್ಷರ' ಎಂದು ಹೊಗಳಿಕೊಂಡದ್ದು ನಾಗರಿಲಿಪಿಯ ಬಗ್ಗೆ ಅವರಿಗಿದ್ದ ಅಭಿಮಾನವನ್ನು ತೋರಿಸುತ್ತದೆ. ಇಲ್ಲಿ 'ರುಚಿರಾಕ್ಷರ' ಎನ್ನುವುದು ಪ್ರಶಸ್ತಿಯನ್ನು ಕುರಿತಾಗಿಯೂ ಹೇಳಿರುವ ಸಾಧ್ಯತೆ ಇದೆ. ಭಾಷೆ ಮತ್ತು ಲಿಪಿಯ ಜೊತೆಗೆ ಗೌರವಕ್ಕೆ ಪಾತ್ರನಾದ ಮಾಧವನು

ಬೇರೆ ಬೇರೆ ಕೃತಿಗಳನ್ನು ಬರೆದವನು. ಆದರೆ ಈ ಶಾಸನಕ್ಕೂ ಮೊದಲು ಶಕವರ್ಷ 699 ರಲ್ಲಿ ಬಾದಾಮಿಯಲ್ಲಿ ಚಲುಕ್ಯ ವಿಜಯಾದಿತ್ಯ ಎನ್ನುವ ರಾಜನೊಬ್ಬ ಒಂದು ಶಾಸನ ಬರೆಸಿದಾಗ ಆ ಶಾಸನದಲ್ಲಿನ (9) ಸಾಲುಗಳನ್ನು ಸಂಸ್ಕೃತ ಭಾಷೆಯಲ್ಲಿಯೂ 10ನೇ ಸಾಲಿನಿಂದ ಕನ್ನಡದಲ್ಲಿ ಬರೆಸಿದ. ಆಗ 10ನೇ ಸಾಲಿನಲ್ಲಿ 'ಅತಃ ಪರಂ ವರ್ಣಾನೈತಾನಿ ಪ್ರಾಕೃತ ಭಾಷಾಯಾಂ' ಎಂದು ಶಾಸನಕವಿ ಹೇಳಿಕೊಳ್ಳುತ್ತಾನೆ. ಆದರೆ ಇಲ್ಲಿ ನಿರ್ದಿಷ್ಟವಾಗಿ ಕನ್ನಡವನ್ನು ಕುರಿತಾಗಿ ಹೇಳದೇ ಇದ್ದರೂ ಸಹ ಭಾಷೆಯ ಬಗ್ಗೆ ಹೇಳಿದ್ದಾನೆ. ಆದರೆ ಖಜುರಾಹೋದಲ್ಲಿ ಸ್ಪಷ್ಟವಾಗಿ ಸಂಸ್ಕೃತದ ಉಲ್ಲೇಖ ಸಿಗುತ್ತದೆ.

ಮೇಜರ್ಅಲೆಕ್ಸಾಂಡರ್ಕನ್ನಿಂಗ್ಹ್ಯಾಮ್ಖ

ಜುರಾಹೋದೇವಾಲಯಕ್ಕೆಭೇಟಿ:-

ಚಾಂಡೆಲ್ಲಾಗಳು ಮೂಲತಃ ಕನೌಜ್ನ ಸಾಮ್ರಾಜ್ಯಶಾಹಿ ಪ್ರತಿಹಾರ ರಾಜರ ಸ್ಥಳೀಯ ಮುಖ್ಯಸ್ಥರು ಮತ್ತು ಸಾಮಂತರಾಗಿದ್ದರು, ಆದರೆ ಹತ್ತನೇ ಶತಮಾನದ ಮಧ್ಯಭಾಗದಲ್ಲಿ ಅವರು ಅಧಿಕಾರವನ್ನು ಕ್ರೋಢೀಕರಿಸಿದರು ಮತ್ತು ಸ್ವತಂತ್ರ ಆಡಳಿತಗಾರರಾದರು. ಚಂಡೆಲ್ಲಾ ರಾಜಕುಮಾರ ಯಶೋವರ್ಮನ್ ತನ್ನ ಪ್ರತಿಹಾರದ ಅಧಿಪತಿಯಿಂದ ವೈಕುಂಠ- ವಿಷ್ಣುವಿನ ಪ್ರತಿಷ್ಠಿತ ಚಿತ್ರವನ್ನು ಪಡೆದುಕೊಂಡನು ಮತ್ತು 950 ರ ಸುಮಾರಿಗೆ ಖಜುರಾಹೋದಲ್ಲಿ ಗಣ್ಯ ನಾಗರ ಶೈಲಿಯಲ್ಲಿ ಮೊದಲನೆಯದಾದ ಭವ್ಯವಾದ ದೇವಾಲಯವನ್ನು (ಈಗ ಲಕ್ಷ್ಮಣ ದೇವಾಲಯ ಎಂದು ಕರೆಯಲಾಗುತ್ತದೆ) ನಿರ್ಮಿಸುವ ಮೂಲಕ ಅವನು ತನ್ನ ವಿಜಯವನ್ನು ಆಚರಿಸಿದನು. ಕಾವ್ಯ, ನಾಟಕ, ನೃತ್ಯ ಮತ್ತು ಸಂಗೀತವನ್ನು ಪ್ರೋತ್ಸಾಹಿಸಿದರು. ಆಡಳಿತಗಾರರಲ್ಲಿ ಇಬ್ಬರು ಸ್ವತಃ ಕವಿಗಳಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಅವರು ದೇವಾಲಯದ ಕಲೆಯ ಉತ್ತಮ ಯೋಜಕರು. ಅವರ ಅಡಿಯಲ್ಲಿ ಖಜುರಾಹೊ ಉತ್ತರ ಭಾರತದ ಪ್ರಮುಖ ದೇವಾಲಯ ಪಟ್ಟಣಗಳಲ್ಲಿ ಒಂದಾಯಿತು. 1022 ರಲ್ಲಿ ಮುಸ್ಲಿಂ ಇತಿಹಾಸಕಾರ ಅಲ್ಬೆರುನಿ ಚಂಡೆಲ್ಲಾ ಸಾಮ್ರಾಜ್ಯದ ರಾಜಧಾನಿ "ಕಜುರಾಹಾ" ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಹನ್ನೆರಡನೆಯ ಶತಮಾನದಿಂದ, ಚಂಡೆಲ್ಲಾಗಳು ತಮ್ಮ ಚಟುವಟಿಕೆಗಳನ್ನು ಹತ್ತಿರದ ಪಟ್ಟಣವಾದ ಮಹೋಬಾ ಮತ್ತು ಕಲಿಂಜರ್ ಮತ್ತು ಅಜಯ್ಗಢ್ನ ಬೆಟ್ಟದ ಕೋಟೆಗಳಿಗೆ ಸ್ಥಳಾಂತರಿಸಿದರು ಮತ್ತು ಇದರ ಪರಿಣಾಮವಾಗಿ ಖಜುರಾಹೊದಲ್ಲಿನ ದೇವಾಲಯದ ಕಟ್ಟಡವು ವೇಗವನ್ನು ಕಳೆದುಕೊಂಡಿತು. ಹಾಗಿದ್ದರೂ, ಇದು ಒಂದು ಧಾರ್ಮಿಕ ಕೇಂದ್ರವಾಗಿ ಉಳಿಯಿತು, ಅರಬ್ ಪ್ರವಾಸಿ ಇಬ್ನ್ ಬಟ್ಟೂಟಾ ಅವರ ಗಮನವನ್ನು ಸೆಳೆಯುವಷ್ಟು ಮುಖ್ಯವಾಗಿದೆ, ಅವರು 1335 ರಲ್ಲಿ ಖಜುರಾಹೊಗೆ ಭೇಟಿ ನೀಡಿದರು.ಜೋಗಿಗಳು (ಯೋಗಿಗಳು, ಮಂತ್ರವಾದಿಗಳು) ಮತ್ತು ಅವರ ಮಾಂತ್ರಿಕ ಸಾಹಸಗಳು. ಅದರ ನಂತರ, ಖಜುರಾಹೊ ಕ್ರಮೇಣ ವಿಸ್ಮೃತಿಗೆ ಜಾರಿತು.

ಸುಮಾರು ಐದು ಶತಮಾನಗಳ ನಂತರ, ಕ್ಯಾಪ್ಟನ್ ಟಿಎಸ್ ಬರ್ಟ್, ಬ್ರಿಟಿಷ್ ಇಂಜಿನಿಯರ್, ಕಾಡಿನ ಬೆಳವಣಿಗೆಯ ನಡುವೆ ಕಣ್ಮರೆಯಾದ ದೇವಾಲಯಗಳನ್ನು ಗುರುತಿಸಿದರು, ಮತ್ತು ಅವರು 1838 ರಲ್ಲಿ ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳಕ್ಕೆ ತಮ್ಮ ವರ್ಣರಂಜಿತ ಖಾತೆಯನ್ನು ನೀಡಿದರು. ಛತ್ತರ್ಪುರದ ಸ್ಥಳೀಯ ಮಹಾರಾಜರು ವ್ಯಾಪಕವಾಗಿ ಕೈಗೊಂಡರು. 1842 ಮತ್ತು 1847 ರ ನಡುವೆ ದೇವಾಲಯಗಳ ದುರಸ್ತಿ ಕೆಲಸ. ಮೇಜರ್ ಜನರಲ್ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್, ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಮೊದಲ ಮಹಾನಿರ್ದೇಶಕ, 1864 ರಲ್ಲಿ ಅಲೆಕ್ಸಾಂಡರ್ ಕನಿಂಗ್ ಹ್ಯಾಮ್ ಈ ಸ್ಥಳವನ್ನು ಸಂದರ್ಶಿಸಿ ಹೊರಭಿತ್ತಿಯಲ್ಲಿ 646 ವಿಗ್ರಹಗಳು ಹಾಗೂ ಒಳಗೆ 226 ವಿಗ್ರಹಗಳನ್ನು ಎಣಿಕೆ ಮಾಡಿ ದಾಖಲಿಸಿದ್ದಾರೆ. 1852 ರಿಂದ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಅವರ ASI ವರದಿಗಳಲ್ಲಿ ವ್ಯವಸ್ಥಿತವಾಗಿ ದೇವಾಲಯಗಳನ್ನು ವಿವರಿಸಿದರು.

  • ಖಜುರಾಹೋದವಾಸ್ತು
    ಶಿಲ್ಪಮತ್ತುಕೆತ್ತನೆ:

ಪ್ರವೇಶದ್ವಾರದಲ್ಲಿಯೇ ತೋರಣವಿದೆ, ಅದು ನಿಮ್ಮ ಪ್ರವೇಶವನ್ನು ಮಂಗಳಕರ ಮತ್ತು ಪವಿತ್ರವಾಗಿಸಲು ಬಾಗಿಲಿನ ದಾರಿಯಲ್ಲಿ ಸುತ್ತುವ ಹೂವಿನ ಹಾರದಂತಿದೆ. ಹಾರವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ ಮತ್ತು ದ್ವಾರದ ಒಂದು ಬದಿಯಿಂದ ಇನ್ನೊಂದು ಬದಿಗೆ ಕುಣಿಕೆಗಳಿಂದ ಹೊದಿಸಲಾಗಿದೆ. ತೋರಣವು ಮಕರಗಳ ಬಾಯಿಯಿಂದ ಹೊರಬರುತ್ತದೆ, ಯಾವಾಗಲೂ ಕಾದು ನೋಡುವ ಪೌರಾಣಿಕ ಮೊಸಳೆಗಳು ಮತ್ತು ಹಾರದ ಮಡಿಕೆಗಳೊಳಗೆ ಚಿಕ್ಕ ಅಪ್ಸರೆಗಳು ಅದನ್ನು ಸ್ವರ್ಗದಾದ್ಯಂತ ಸಾಗಿಸುತ್ತಿರುವಂತೆ ತೋರುತ್ತವೆ. ಗರ್ಭಗುಡಿಯು ಪರಸ್ಪರ ಸಂಪರ್ಕ ಹೊಂದಿದ ಹಾದಿಗಳಿಂದ ಸುತ್ತುವರೆದಿದೆ, ಇದು ಪಕ್ಕ ಮತ್ತು ಮುಂಭಾಗದ ಬಾಲ್ಕನಿಗಳನ್ನು ಹೊಂದಿದೆ. ಬಾಲ್ಕನಿಗಳಲ್ಲಿ ಅಸಮರ್ಪಕವಾದ ನೈಸರ್ಗಿಕ ಬೆಳಕಿನಿಂದಾಗಿ ಗರ್ಭಗುಡಿಯು ತುಂಬಾ ಕಡಿಮೆ ಬೆಳಕನ್ನು ಹೊಂದಿದೆ, ಹೀಗಾಗಿ "ಗುಹೆಯಂತಹ ವಾತಾವರಣ" ವನ್ನು ಸೃಷ್ಟಿಸುತ್ತದೆ, ಇದು ದೇವಾಲಯದ ಬಾಹ್ಯ ಭಾಗಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಗರ್ಭಗ್ರಹದ ಒಳಗೆ ಶಿವನನ್ನು ಸೂಚಿಸುವ ಅಮೃತಶಿಲೆಯ ಲಿಂಗವಿದೆ. ಈ ದೇವಾಲಯವು ಗೋಡೆಗಳು, ಛಾವಣಿಗಳು ಮತ್ತು ಕಂಬಗಳ ಮೇಲಿನ ಸೊಗಸಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಕೆತ್ತನೆಗಳು ಜೀವನದ ಎಲ್ಲಾ ನಾಲ್ಕು ಅಗತ್ಯ ಅನ್ವೇಷಣೆಗಳನ್ನು ಚಿತ್ರಿಸುತ್ತದೆ - ಕಾಮ, ಅರ್ಥ, ಧರ್ಮ ಮತ್ತು ಮೋಕ್ಷ. ಅಧಿಷ್ಠಾನದ ಮೇಲೆ, ದೇವಾಲಯದ ಮಧ್ಯ ಗೋಡೆಯ ಜಾಗವನ್ನು ಮೂರು ಬ್ಯಾಂಡ್ಗಳ ಶಿಲ್ಪಗಳಿಂದ ವಿನ್ಯಾಸಗೊಳಿಸಲಾಗಿದೆ, ಪ್ರತಿಯೊಂದೂ ಒಂದು ಮೀಟರ್ ಎತ್ತರವಾಗಿದೆ. ಶಿವ, ಗಣೇಶ ಮತ್ತು ವೀರಭದ್ರ, ಅಪ್ಸರೆಯರು, ಅಪ್ಸರೆಯರು, ಸಂಗೀತಗಾರರು ಮತ್ತು ದೈನಂದಿನ ಜೀವನದ ದೃಶ್ಯಗಳು ರಿದಂತೆ ದೇವತೆಗಳ ಮತ್ತು ದೇವತೆಗಳ ಸಂಕೀರ್ಣ ಕೆತ್ತನೆಯ ಶಿಲ್ಪಗಳಿವೆ. ದೇವಾಲಯದ ಹೊರ ಗೋಡೆಗಳ ಸುತ್ತಲೂ ಸೂಕ್ಷ್ಮವಾಗಿ ಕೆತ್ತಿದ ಕಾಮಪ್ರಚೋದಕ ಶಿಲ್ಪಗಳಿವೆ, ಇದು ಜೀವನದ ಕಾಮ ಅಂಶವನ್ನು ಸೂಚಿಸುತ್ತದೆ. 

"ತಿರುಗುವ, ಅಗಲವಾದ ಸೊಂಟದ ಮತ್ತು ಎತ್ತರದ ಅಪ್ಸರೆಗಳು ತಮ್ಮ ಉದಾರವಾದ ಸ್ತನಗಳನ್ನು ಪ್ರದರ್ಶಿಸುತ್ತವೆ. ಬಾಹ್ಯ ಗೋಡೆಯ ಫಲಕಗಳು ಕೆಲಸ ಮಾಡಿದ ಈ ತಿರುಳಿರುವ ಅಪ್ಸರೆಗಳು ಕಲ್ಲಿನ ಮೇಲ್ಮೈಯಲ್ಲಿ ದಂಗಾಗಿ ಓಡುತ್ತಾರೆ, ಮೇಕಪ್ ಹಾಕಿಕೊಳ್ಳುತ್ತಾರೆ, ತಮ್ಮ ಕೂದಲನ್ನು ತೊಳೆಯುತ್ತಾರೆ, ಆಟಗಳನ್ನು ಆಡುತ್ತಾರೆ, ನೃತ್ಯ ಮಾಡುತ್ತಾರೆ ಮತ್ತು ಕೊನೆಯಿಲ್ಲದೆ ತಮ್ಮ ನಡುಪಟ್ಟಿಗಳನ್ನು ಗಂಟು ಹಾಕುತ್ತಾರೆ ಮತ್ತು ಬಿಚ್ಚಿಡುತ್ತಾರೆ... ಸ್ವರ್ಗೀಯ ಅಪ್ಸರೆಗಳ ಪಕ್ಕದಲ್ಲಿ ಶ್ರೇಯಾಂಕಗಳಿವೆ. ಗ್ರಿಫಿನ್ಗಳು, ರಕ್ಷಕ ದೇವತೆಗಳು ಮತ್ತು ಅತ್ಯಂತ ಕುಖ್ಯಾತವಾಗಿ, ಅತಿರಂಜಿತವಾಗಿ ಅಂತರ್ಗತವಾಗಿರುವ ಮೈಥುನಗಳು ಅಥವಾ ಲವ್ಮೇಕಿಂಗ್ ದಂಪತಿಗಳು, ಈ ಕೆತ್ತನೆಗಳ ಲೈಂಗಿಕ ಸ್ವಭಾವವು ಸೈಟ್ ಅನ್ನು ಕಾಮಸೂತ್ರ ದೇವಾಲಯ ಎಂದು ಉಲ್ಲೇಖಿಸಲು ಕಾರಣವಾಗಿದ್ದರೂ, ಅವರು ನಿಖರವಾಗಿ ವಿವರಿಸಿದ ಸ್ಥಾನಗಳನ್ನು ವಿವರಿಸುವುದಿಲ್ಲ.

  • ಖಜುರಾಹೋಬಗ್ಗೆಜೇಮ್ಸ್ಮ್ಯಾ
    ಕ್ಕನ್ನಾಷ್ದೃಷ್ಟಿಕೋನ:

ಈ ಕೆತ್ತನೆಗಳ ಬಗ್ಗೆ ಇನ್ನೊಂದು ದೃಷ್ಟಿಕೋನವನ್ನು ಜೇಮ್ಸ್ ಮ್ಯಾಕ್ಕನ್ನಾಷ್ ನೀಡಿದ್ದಾರೆ. ತಮ್ಮ ಕಾಮಸೂತ್ರ ದ ಚರಿತ್ರೆಯಲ್ಲಿ ಮ್ಯಾಕ್ಕನ್ನಾಷ್ "quot;ತೀವ್ರ ಆಸಕ್ತಿ ಹುಟ್ಟಿಸುವ ಮಧುರವಾದ ಕೆತ್ತನೆಗಳಲ್ಲಿ ಶೇಕಡಾ 10ರಷ್ಟು ಖಜುರಾಹೊ ಶಿಲ್ಪಗಳು ಶೃಂಗಾರಕಲೆಯ ಪರಮಾವಧಿಯಾಗಿವೆ" ಎಂದು ವಿವರಿಸಿದ್ದಾರೆ : "ಮನಮೋಹಕವಾಗಿ ರಚಿಸಿದ ಗೋಡೆಯ ಹೊರಭಾಗದ ಅಂಕಣದಲ್ಲಿ ಬಳುಕುವ, ತುಂಬಿದ ನಿತಂಬ ಮತ್ತು ಎತ್ತರವಾದ ಸ್ತನಗಳುಳ್ಳ ಸುಂದರ ತರುಣಿಯರು ತಮ್ಮ ಸಮೃದ್ಧ ಸುಂದರ ಆಕೃತಿಯ ಆಭರಣಾಲಂಕೃತ ಶರೀರವನ್ನು ಅಮೋಘವಾಗಿ ಪ್ರದರ್ಶಿಸಿದ್ದಾರೆ. ಈ ತುಂಬು ಮೈಯ ಅಪ್ಸರೆಯರು ಶಿಲೆಯ ಮೇಲ್ಮೈ ಮೇಲೆಲ್ಲಾ ತಮ್ಮ ಮುಖಕ್ಕೆ ಪ್ರಸಾದನಗಳನ್ನು ಲೇಪಿಸುತ್ತಿರುವ, ತಮ್ಮ ಕೇಶರಾಶಿಯನ್ನು ಶುಚಿಗೊಳಿಸುತ್ತಿರುವ, ಆಟವಾಡುತ್ತಿರುವ, ನರ್ತಿಸುತ್ತಿರುವ ಮತ್ತು ತಮ್ಮ ನಡುಕಟ್ಟನ್ನು ಎಡೆಬಿಡದೆ ನಿರಂತರವಾಗಿ ತೆರೆದು ಮತ್ತೆ ಕಟ್ಟುತ್ತಿರುವ ವಿವಿಧ ಭಂಗಿಗಳ ಮೂಲಕ ಭೋಗವಿಲಾಸೀ ಸ್ವೇಚ್ಛಾಜೀವನವನ್ನು ನಡೆಸುತ್ತಿದ್ದಾರೆ.ಈ ಸ್ವರ್ಗಸದೃಶ ಸುಂದರ ಅಪ್ಸರೆಯರ ಪಕ್ಕದಲ್ಲೇ ಒತ್ತೊತ್ತಾಗಿ ದಟ್ಟವಾದ ಗೃಧ್ರ ಸಿಂಹಗಳ ಸಾಲು, ಕಾಪಾಡುವ ದೇವರ ಮೂರ್ತಿಗಳು ಮತ್ತು ಸುಪ್ರಸಿದ್ಧವಾದ, ಬೆಸೆಯಲ್ಪಟ್ಟ ಮೈಥುನ ಗಳ ಅಥವಾ ಪ್ರೇಮಿಸುತ್ತಿರುವ ಜೋಡಿಗಳೂ ರಾರಾಜಿಸುತ್ತಿವೆ" ಈ ಕೆತ್ತನೆಗಳ ಲೈಂಗಿಕ ಸ್ವರೂಪವು ಪ್ರಸ್ತುತ ಕ್ಷೇತ್ರವನ್ನು "ಕಾಮಸೂತ್ರ ದೇವಾಲಯ" ಎಂದು ಗುರುತಿಸುವಂತೆ ಪ್ರೇರೇಪಿಸಿದೆ. ಇವುಗಳು ಅತೀ ಸೂಕ್ಷ್ಮವಾಗಿ ವಿವರಿಸಿದ ಭಂಗಿಗಳನ್ನು ಸಚಿತ್ರವಾಗಿ ಉಲ್ಲೇಖಿಸುವುದಿಲ್ಲ. ಅಲ್ಲದೇ ಇವುಗಳು ವಾತ್ಸಾಯನನ ಪ್ರಸಿದ್ಧ ಕಾಮಸೂತ್ರಗಳ ತತ್ವಚಿಂತನೆಗಳನ್ನೂ ಪ್ರದರ್ಶಿಸುವುದಿಲ್ಲ. "ಭಾರೀ ಪ್ರಮಾಣದ ಅನಿವರ್ಚನೀಯ ಮೋಹಕತೆಯೊಂದಿಗೆ ದೈವಿಕ ತಂತ್ರಶಾಸ್ತ್ರ ಮತ್ತು ಫಲವತ್ತತೆ, ಸಮೃದ್ಧತೆಯ ಅಧ್ಬುತ ಸಂಯೋಗದ ಕಲಾಕೃತಿ"ಗಳಾಗಿ ಈ ಕೆತ್ತನೆಗಳು ಮಾನವರ ಜನ್ಮ ನೀಡುವ (ಸಂತಾನೋತ್ಪತ್ತಿ) ಪ್ರಕ್ರಿಯೆಯನ್ನು ಮಾತ್ರ ನಿರೂಪಿಸುವುದಕ್ಕಿಂತ ಹೆಚ್ಚಾಗಿ ಭೋಗಾಸಕ್ತ ಜೀವನವನ್ನು ನಿರೂಪಿಸುತ್ತವೆ ಎಂಬ ಸಾಕ್ಷ್ಯಸಹಿತ ಆಧಾರವನ್ನು ಹುಸಿಗೊಳಿಸಿದೆ. ಭವಿಷ್ಯೋದ್ಧೇಶದಿಂದ ಕಡೆದ ಈ ಕೆತ್ತನೆಗಳು ಇತರರಿಗೆ ಕೇಡನ್ನೆಣಿಸುವ ಸ್ವಭಾವವನ್ನು ಶಮನಗೊಳಿಸಲು ವಿನ್ಯಾಸಗೊಳಿಸಲಾದ "ಸಾಂಕೇತಿಕ-ಮನೋಜ್ಞ ರೇಖಾಕೃತಿಗಳು ಅಥವಾ ಯಂತ್ರಗಳು". ಸ್ವಭಾವ ಸಹಜ ನೈಸರ್ಗಿಕ ನಿಯಮಕ್ಕಿಂತ ಹೆಚ್ಚಾಗಿ ಸುಸಂಸ್ಕೃತ ಕಲಾತ್ಮಕ ಇಂದ್ರಿಯಾತೀತ ಪುರುಷತ್ವವನ್ನು ಒಳಗೊಂಡ ಲೈಂಗಿಕ ಚಿತ್ರಗಳು ಪುರುಷತ್ವವನ್ನು ಪ್ರತಿನಿಧಿಸಿದ್ದು ಪುರುಷನು ಲೋಕದಲ್ಲಿ ಶಕ್ತಿಶಾಲಿ ಪ್ರಭುವಾಗಿದ್ದಾನೆ ಎಂಬುದನ್ನು ಈ ಅಲಂಕಾರ ವ್ಯಕ್ತಪಡಿಸುತ್ತವೆ.[೬] 

ದೈವಿಕ ತಂತ್ರಶಾಸ್ತ್ರದ ಸಂಪ್ರದಾಯಗಳು ಸ್ವೀಕರಿಸಲ್ಪಟ್ಟ 950 ಮತ್ತು 1150ರ ಮಧ್ಯಭಾಗದಲ್ಲಿ ಚಾಂದೇಲ ಸಾರ್ವಭೌಮರು ಈ ದೇವಾಲಯಗಳನ್ನು ನಿರ್ಮಿಸಿದರು. ಹಿಂದಿನ ಕಾಲದಲ್ಲಿ ಮುಘಲರ ವಿಜಯೋತ್ಸವಕ್ಕಿಂತ ಮೊದಲು ಆಶ್ರಮಗಳಲ್ಲಿ ವಾಸಿಸುತ್ತಿರುವ ಹುಡುಗರು ತಾವು ಪುರುಷತ್ವ ಪಡೆಯುವವರೆಗೆ ಬ್ರಹ್ಮಚರ್ಯ ವನ್ನು ಪಾಲಿಸುತ್ತಿದ್ದರು. ಇಲ್ಲಿ ಇವರಿಗೆ ಪ್ರಪಂಚದ ಬಗೆಗಿನ ಜ್ಞಾನವನ್ನು ಪಡೆಯುವಂತೆ ಅವಕಾಶ ಒದಗಿಸಲಾಗುತ್ತಿದ್ದು ಈ ಕೆತ್ತನೆಗಳನ್ನು ಪರೀಕ್ಷಿಸುವ ಮೂಲಕ ಮತ್ತು ಇವುಗಳಲ್ಲಿ ಚಿತ್ರಿಸಿದ ಪ್ರಾಪಂಚಿಕ ಭೋಗಾಸಕ್ತಿಯನ್ನು ಅಭ್ಯಸಿಸುವ ಮೂಲಕ ಇವರನ್ನು ಪರಿಪೂರ್ಣ ಗೃಹಸ್ಥರನ್ನಾಗಿ ತಯಾರುಗೊಳಿಸಲಾಗುತ್ತಿತ್ತು.

  • ಜೈನ್ಬಸದಿ(ಮಂದಿರ):

ಇಲ್ಲಿಯ ದೇವಾಲಯಗಳಲ್ಲಿ ಮುಖ್ಯವಾದ ವಾಯವ್ಯ ಭಾಗದ ಸಮೂಹದಲ್ಲಿ ಶೈವ ವೈಷ್ಣವ ಮಂದಿರಗಳಿವೆ. ಇವುಗಳಲ್ಲಿ ಕಂದರ್ಯ ಮಹಾದೇವ್ ಭಾರತದ ಅತಿಸುಂದರ ದೇಗುಲಗಳಲ್ಲೊಂದು, ಬೇಲೂರು, ಹಳೆಯಬೀಡುಗಳಲ್ಲಿರುವಂತೆ ಎತ್ತರವಾದ ಜಗಲಿಯ ಮೇಲೆ ಇದನ್ನು ಕಟ್ಟಲಾಗಿದೆ. 109 ಅಡಿ ಉದ್ದ 60 ಅಡಿ ಅಗಲ ಮತ್ತು ಭೂಮಿಯ ಮೇಲಿನಿಂದ 116 ಅಡಿ ಎತ್ತರ ಅಥವಾ ಜಗತಿಯಿಂದ 88 ಅಡಿ ಇರುವ ತಳಹದಿಯ ಮೇಲೆ ನಿರ್ಮಿತವಾಗಿದೆ. ಆಕಾರದಲ್ಲಿ ಅಷ್ಟು ಬೃಹತ್ತಾಗಿಲ್ಲದಿದ್ದರೂ ಒಂದು ಘನವಾಗಿ, ಎತ್ತರದಿಂದ ಎತ್ತರಕ್ಕೆ, ಒಂದನ್ನೊಂದು ಮೀರಿ ಏರುತ್ತಿರುವ ಶಿಖರಗಳಿಂದ ಕೊನೆಗೆ ಏಕಮೇವಾದ್ವಿತೀಯವಾಗಿ ನಿಮಿರಿನಿಂತ ಗಿರಿಶೃಂಗದಂಥ ಗರ್ಭಾಂಕಣದ ಶಿಖರದ ಔನ್ನತ್ಯ ಪ್ರೇಕ್ಷಕರ ಹೃನ್ಮನಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಕಲೆಯ ದೃಷ್ಟಿಯಿಂದ ಭುವನೇಶ್ವರದ ದೇವಾಲಯಗಳು ಆಕರ್ಷಣೀಯವಾಗಿದ್ದರೆ, ಮಹಾದೇವ ದೇವಾಲಯ ಬೇಲೂರಿನ ಚನ್ನಕೇಶವ ದೇವಾಲಯದಂತೆ ಒಳಗೂ ಹೊರಗೂ ಮನೋಹರವಾಗಿದೆ. ಅಷ್ಟದಿಕ್ಷಾಲಕರು, ಅಪ್ಸರೆಯರು, ಸುರಸುಂದರಿಯರು, ವಿದ್ಯಾಧರೆಯರು ಇತ್ಯಾದಿ ವಿವಿಧ ಭಂಗಿಭಾವಗಳ ರಮಣೀಯ ಶಿಲಾಕೃತಿಗಳು ಇಲ್ಲಿ ಗುಂಪುಗೂಡಿವೆ. ಇಲ್ಲಿಯ ಕಲಾಸಂಪತ್ತು , ಭಾವಪ್ರೇರಕಶಕ್ತಿ ಅತ್ಯದ್ಭುತವಾದುದೆಂದು ಕಲಾವಿಮರ್ಶಕರು ಉದ್ಗಾರವೆತ್ತಿದ್ದಾರೆ. ಈ ಗುಂಪಿನ ವೈಷ್ಣವ ದೇವಾಲಯಗಳಲ್ಲಿ ಚತುರ್ಭುಜ ವಿಷ್ಣುಮಂದಿರ 85 ಅಡಿ ಉದ್ದ ಮತ್ತು 44 ಅಡಿ ಅಗಲವಾಗಿದೆ. ಪಂಚಾಯತನ ಪದ್ಧತಿಯಲ್ಲಿ ನಿರ್ಮಿತವಾಗಿರುವ ಈ ಮಂದಿರಗಳಲ್ಲಿ ಐದು ಗರ್ಭಗೃಹಗಳಿವೆ. ಈ ಹಿಂದೂ ದೇವಾಲಯಗಳ ಮಾದರಿಯಲ್ಲೇ ನಿರ್ಮಿತವಾದ ಆರು ಜೈನ ದೇವಾಲಯಗಳು ಆಗ್ನೆಯ ಭಾಗದಲ್ಲಿದೆ . ಇವುಗಳ ಹೊರಗೋಡೆಗಳ ಮೇಲೆ ತೋರಣಗಳು, ಸ್ತಂಭಿಕೆಗಳು ಮುಂತಾದ ವಾಸ್ತುಕೃತಿಗಳ ಅಲಂಕರಣವಿಲ್ಲದೆ ಅವು ಸರಳವಾಗಿವೆ. ಅವುಗಳ ಸ್ಥಾನದಲ್ಲಿ ಜೋಡಿಸಲಾಗಿರುವ ಮೂರ್ತಿಗಳಿಂದಾಗಿ ಈ ಗೋಡೆಗಳಿಗೆ ವಿಶೇಷವಾದ ಶೋಭೆ ಪ್ರಾಪ್ತವಾಗಿದೆ. ಈ ಜೈನ ಮಂದಿರಗಳಲ್ಲಿ ಮುಖ್ಯವಾದ ಜಿನನಾ ಬಸದಿ 60 ಅಡಿ ಉದ್ದ ಮತ್ತು 30 ಅಡಿ ಅಗಲವಾದ್ದು. 

ಈ ಗುಂಪಿನ ಪಕ್ಕದಲ್ಲಿರುವ ಪಾಳಾದ ಜೈನಮಂದಿರವೊಂದು ಗಮನಾರ್ಹವಾದ್ದು. ಘಂಟೈ ಮಂದಿರವೆಂದು ಹೆಸರಾದ ಈ ಮಂದಿರ ಪೂರ್ಣವಾಗಿದ್ದಾಗ ಆ ರೀತಿಯ ಕಟ್ಟಡಗಳಲ್ಲಿ ಮಕುಟಪ್ರಾಯವಾಗಿತ್ತೆಂದು ಹೇಳಬಹುದು. ಈಗ ಉಳಿದಿರುವ ಭಾಗಗಳಲ್ಲಿರುವ, ಉತ್ತಮ ಕೈಚಳಕ ತೋರುವ ಕಂಬಗಳು, ಭವ್ಯ ಕೆತ್ತನೆಗಳಿರುವ ಪ್ರವೇಶದ್ವಾರ ನೋಟಕರ ಕಣ್ಮನಗಳನ್ನು ತಣಿಸುತ್ತವೆ. ಈ ಪರಿಸರದಲ್ಲಿರುವ ಮತ್ತೆ ಕೆಲವು ಮಂದಿರಗಳೂ ಉತ್ತಮ ಕಲಾವಂತಿಕೆಯಿಂದ ಕೂಡಿವೆ; ಕೆಲವು ಪಾಳು ಬಿದ್ದಿವೆ. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಮಹೋನ್ನತ ಘಟ್ಟವನ್ನು ರೂಪಿಸುವ ಉತ್ತಮ ನಿದರ್ಶನಗಳ ಸಾಲಿನಲ್ಲಿ ಸೇರುತ್ತವೆಂದು ನಿಸ್ಸಂದೇಹವಾಗಿ ಹೇಳಬಹುದು. ಭಾರತೀಯ ಶಿಲ್ಪಕಲೆಯ ಪರಾಕಾಷ್ಠೆಯ ಉತ್ತಮ ನಿದರ್ಶನಗಳಲ್ಲಿ ಖಜುರಾಹೊದ ಶಿಲ್ಪಗಳೂ ಸೇರುತ್ತವೆ. ಹಂತಹಂತವಾಗಿ ಕೆತ್ತಲಾದ ನಗ್ನ ಅಪ್ಸರೆಯರ ಅಸಾಧಾರಣ ಸುಂದರ ದೇಹಗಳು ಬಾಗಿ ಬಳುಕುತ್ತ ನೋಟಕರ ಚಿತ್ತವನ್ನು ತಮ್ಮಲ್ಲಿ ಸೆರೆಹಿಡಿಯುತ್ತವೆ. ಸುಂದರ ಸ್ತ್ರೀಯರ ದೇಹಗಳಲ್ಲಿ ತುಂಬಿ ತುಳುಕುವ ವಿವಿಧ ಶೃಂಗಾರ ಪ್ರಧಾನ ಭಾವಭಂಗಿಗಳು, ಪುರುಷರ ಚಿತ್ತವನ್ನು ಕೋಭೆಗೊಳಿಸುವ ರಸಮಯ ಸನ್ನಿವೇಶಗಳು ಪ್ರೇಕ್ಷಕರ ಒಂದೊಂದು ನೋಟಕ್ಕೂ ಹೊಸಹೊಸ ಭಾವನೆಗಳನ್ನು ಸೂಚಿಸುತ್ತವೆ. ಮಧ್ಯಯುಗೀನ ಭಾರತೀಯ ಶಿಲ್ಪಿಗಳು ತಮ್ಮ ಅತಿಮಾನುಷ ಕಲಾದವಂತಿಕೆಯನ್ನು ಖಜುರಾಹೊ ಮಂದಿರಗಳಲ್ಲಿ ಪ್ರದರ್ಶಿಸಿ ವಿಶ್ವದ ಕಲಾ ಇತಿಹಾಸದಲ್ಲಿ ಅಮರರಾಗಿದ್ದಾರೆ.

 .    .    .

Discus