ಈಗ ವಿಷಯಕ್ಕೆ ಬರೋಣ ಈ ಬರವಣಿಗೆ ಮೂಲಕ ಓದುಗರಿಗೆ ತಿಳಿಸಲು ಪ್ರಯತ್ನ ಮಾಡುತ್ತಿರುವ ವಿಷಯ “ ಈ ಜೀವವೇ ನನ್ನ ಪ್ರಪಂಚ” ಈ ಸಾಲುಗಳು ಓದುಗರಿಗೆ ಯಾವ ರೀತಿ ಅರ್ಥ ನೀಡಬಹುದೋ ತಿಳಿದಿಲ್ಲ? ಹೌದು ನಾನು ಮಾತನಾಡಬೇಕು ಎಂದುಕೊಂಡಿರುವ ವಿಷಯ ಅಪ್ಪಾ ಅಮ್ಮ ನ ಬಗ್ಗೆ.....
ಹೌದು ಈ ಜೀವವೇ ನನ್ನ ಪ್ರಪಂಚ ......
ಯಾರಾದರೂ ನಿಮಗೆ ಸ್ವರ್ಗ ಅಂದರೆ ಏನು ಅಂದರೆ ನೀವು ಏನು ಹೇಳುತ್ತೀರಿ?....
ನಾನು ಹೇಳುವುದು ಏನು ಗೊತ್ತಾ ಅಪ್ಪಾನ ಹೆಗಲು, ಅಮ್ಮನ ಮಡಿಲು ಎಂದು ಹೇಳುವೆ.. ಕಾರಣ ಅವರ ಪ್ರೀತಿ ವಾತ್ಸಲ್ಯದ ಬಗ್ಗೆ ಹೇಳುವುದು ಹೊಸದಾಗಿ ಏನೂ ಇಲ್ಲ ಅಂತ ಅನಿಸಬಹುದು, ಆದರೆ ಹೊಸತನದಲ್ಲಿ ಹೇಳುವೆ...........ಈ ಸಾಲುಗಳನ್ನು ಒಮ್ಮೆ ಓದಿ ಆಲೋಚನೆ ಮಾಡಿ ನೋಡಿ.....!!!!!!
ಮಾಸ್ಕ್ ಹಾಕೋದಕ್ಕೆ ಆಧಾರ ಕಿವಿಗಳಂತೆ!
ನೀವು ಎಷ್ಟೇ ಎತ್ತರಕ್ಕೆ ಏರಿದರು ಅದಕ್ಕೆ ಅಡಿಪಾಯ ನಿಮ್ಮ ಅಪ್ಪಾ ಅಮ್ಮ ಅನ್ನೋದು ಮರೆಯಬೇಡಿ...........
ಬೇರೆ ಯಾರದ್ದೊ ಪ್ರೀತಿಯಲ್ಲಿ ಮುಂದೆ ಒಂದು ದಿನ ಪ್ರೀತಿ ವ್ಯತ್ಯಾಸವಾಗಬಹುವುದು ಆದರೆ ಬದಲಾವಣೆಯೆ ಆಗದ ಪ್ರೀತಿ ಅಪ್ಪಾ ಅಮ್ಮನದ್ದು ಮಾತ್ರ ನೆನಪಿರಲಿ.
ಅಮ್ಮನ ಪ್ರಪಂಚ ಚಿಕ್ಕದಂತೆ ಯಾಕೆ ಗೊತ್ತಾ ಆಕೆ ತನ್ನ ಗಂಡ, ಮಕ್ಕಳೆ ಪ್ರಪಂಚ ಆದರೆ ಆಕೆ ಮನಸ್ಸು ತುಂಬಾ ದೊಡ್ಡದು. ಅಪ್ಪಾನ ಪ್ರೀತಿ ಅಮ್ಮನಿಗಿಂತ ಏನು ಕಡಿಮೆ ಇಲ್ಲ ತನ್ನ ಮಕ್ಕಳಿಗಾಗಿ ತನ್ನ ಬದುಕನ್ನೆ ಮರೆತು ಬದುಕುತ್ತಿರುವ ಜೀವ ಅಪ್ಪಾ. ಚಿಕ್ಕ ವಯಸ್ಸಿನಿಂದಲೂ ಒಂದು ಚಿಕ್ಕ ಕಷ್ಟವನ್ನು ಪರಿಚಯ ಮಾಡಿಕೊಡದೆ ಬೆಳೆಸಿದ ಅವರಿಗೆ ಸಿಕ್ಕೋದು ಬರಿ ನೋವು.
ಈ ರೀತಿ ಕಷ್ಟ ತಿಂದು ದಾರಿ ತೋರಿಸಿದ ಅವರಿಗೆ ಮಕ್ಕಳು ಕೊಡುವುದಾದರು ಏನು?
ಈ ಪ್ರಶ್ನೆ ನಮಗೆ ನಾವೇ ಕೇಳಿ ಕೊಳ್ಳಬೇಕು ಅನ್ಸುತ್ತೆ.
ನೀ ಸೋತರೇ ಹೆಗಲಾಗಿ ನಿಂತ ಅವರನ್ನು ನೀನು ಗೆದ್ದಾಗ ಅವರನ್ನು ತಿರುಗಿ ನೋಡಿದೆ ಇರುವುದು ಸರಿಯೇ?
ಅವರಿಗೆ ನಿಮ್ಮ ಹಣ ಆಸ್ತಿ ಬೇಡ ಅವರು ಕೇಳುವುದು ಸ್ವಲ್ಪ ಸಮಯ, ಇರುವುದಕ್ಕೆ ಜಾಗ ಅಷ್ಟೆ.
ಇದೆಲ್ಲ ಇತ್ತೀಚೆನ ದಿನಗಳಲ್ಲಿ ಕಂಡ ದೃಶ್ಯವು ಹೌದು!!!ಎಷ್ಟೋ ಕಷ್ಟದ ಸಮಯವನ್ನು ದಾಟಿಸಿ ಮದುವೆ ಮಾಡಿ ತಮ್ಮ ಜವಾಬ್ದಾರಿಗಳನ್ನು ಮುಗಿಸಿದ ಅವರಿಗೆ ಸಿಗುವುದು ಏನು.?
ಬದುಕಿನ ದಾರಿ ತೋರಿಸಿದ ಅವರಿಗೆ ಮಕ್ಕಳು ಕೊಡುವುದಾದರು ಏನು ಗೊತ್ತಾ ವೃದ್ದಶ್ರಮಕ್ಕೆ ದಾರಿ.!!!!!!!ಎಷ್ಟು ಸರಿ ಇದು.....
ಮನೆಗೆ ಸೊಸೆಯಾಗಿ ಹೋದ ಹೆಣ್ಣು ಮಗಳಿಗೊಂದು ಮನವಿ ನಾಳೆ ನಿಮ್ಮ ಮಕ್ಕಳು ನಿಮಗೂ ಮಾಡುವುದು ಅದನ್ನೇ ಅನ್ನೋದು ಮರೆಯಬೇಡ. ಮಕ್ಕಳು ಓದಿ ಕಲಿಯುವುದು ಕಡಿಮೆ, ನೋಡಿ ಕಲಿಯುವುದು ಹೆಚ್ಚು ನೆನಪಿರಲಿ .ಅತ್ತೆ ಮಾವರನ್ನು ಮನೆಯಿಂದ ಆಚೆ ಹಾಕುವ ಮೊದಲ ನಿಮ್ಮ ಅಪ್ಪಾ ಅಮ್ಮನ ಮತ್ತು ಮುಂದೆ ನಿಮ್ಮನ್ನೆ ನೆನಪು ಮಾಡಿಕೊಳ್ಳಿ .(ಇದು ಕಲಿಯುಗ ನೀವು ಮಾಡಿದ್ದು ನಿಮಗೆ ವಾಪಸ್ ಬಂದು ತಲುಪುತ್ತೆ.)
ಈ ಎಲ್ಲಾ ಸಾಲುಗಳು ನನ್ನ ಸ್ವಂತ ಆಲೋಚನೆಯು ಹೌದು ನನ್ನ ಸುತ್ತಮುತ್ತ ನೋಡಿದ ಘಟನೆಗಳು ಹೌದು..ಈ ಸಾಲುಗಳು ಓದುಗರಿಗೆ ಒಂದು ಒಳ್ಳೆ ಸಂದೇಶ ನೀಡಿದೆ ಅನ್ನೋದು ನನ್ನ ಭಾವನೆ.
ನಮಸ್ಕಾರ.
ಇನ್ನು ಒಂದು ವಿಷಯ ಹೇಳೋದು ಮರೆತೆ,! ಈ ಸಾಲುಗಳನ್ನು ಬರೆದಿರುವುದು ತಪ್ಪಿಲ್ಲಾ ಅಂತ ಭಾವಿಸುವೆ ...
ಎಷ್ಟೋ ಮಕ್ಕಳಿಗೆ ಬೇಡವಾದ ತಂದೆ ತಾಯಿಯರನ್ನು ತನ್ನ ತಂದೆ ತಾಯಿಯಂತೆ ನೋಡಿಕೊಳ್ಳುತ್ತಾ ಅದರಲ್ಲಿ ಸಂತೋಷ ಕಾಣುತ್ತಾ ಎಷ್ಟೋ ಅನಾಥಲಯಗಳು, ವೃದ್ದಲಯಗಳಿಗೆ ಸಹಾಯ ಮಾಡುವ ಮನಸ್ಸಿದ್ದಲ್ಲಿ..
ಈ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಸಹಾಯ ಮಾಡಿ.
ಧನ್ಯವಾದಗಳು ತಪ್ಪಿದ್ದರೆ ಮನ್ನಿಸಿ.....