ಮಲೆನಾಡಿನ ಬಳಿ ಇರುವ ಒಂದು ಪುಟ್ಟ ಹಳ್ಳಿ.ಆ ಹಳ್ಳಿಯ ಹೆಸರು ಸೀತಾಪುರ,,,,,,ಆ ಮಲೆನಾಡಿನ ಅಚ್ಚ ಹಸಿರು ತುಂಬಿದ ಆ ಪುಟ್ಟ ಹಳ್ಳಿ ನೋಡಲು ತುಂಬಾ ಸುಂದರ…….ಆ ಹಳ್ಳಿಯ ದೊಡ್ಡ ಮನೆಯ ಮುದ್ದು ಮಗನೇ ಈ ಕಥೆಯ ನಾಯಕ ಶ್ರೀ ರಾಮ್ . ಈ ರಾಮ್ ಹೆಸರಿಗಷ್ಟೆ ರಾಮ ಅಲ್ಲ……….ಆತನ ಮದುವೆಯ ದಿನ ಅದು ,,,ತನ್ನ ಮಾವನ ಮಗಳ ಜೊತೆ. ಇಷ್ಟವಿಲ್ಲದ ಮದುವೆಗೆ ಮನಸಿಲ್ಲದಂತೆ ಒಪ್ಪಿಗೆ ನೀಡಿದ್ದ………ಆಕೆ ಕೂಡ ಸುಂದರವಾಗೆ ಇದ್ದಳು ಆದರೆ……..ಶ್ರೀರಾಮ್ ನ ಈ ಪರಿಸ್ಥಿತಿಗೆ ಒಂದು ರೀತಿ ಕಾರಣ ಆಕೆ ಮತ್ತು ಆಕೆಯ ತಂದೆ ತಮ್ಮ ಸ್ವಾರ್ಥಕ್ಕಾಗಿ ಅಷ್ಟೆ……… …..ಶ್ರೀರಾಮ್ ನ ಪ್ರೀತಿಯ ವಿಷಯ ತಿಳಿದ್ದಿದ್ದರು ಪ್ರತ್ಯಕ್ಷವಾಗಿ ಅಲ್ಲದಿದ್ದರು ಪರೋಕ್ಷವಾಗಿ ಇವರು ಕಾರಣರೇ……….
Image by Veer Chudasama from Pixabay
ಮದುವೆ ದಿನ ಶ್ರೀರಾಮ್ ಸುಮ್ಮನೆ ಕೂತಿದ್ದನು.ಅವನ ಸ್ನೇಹಿತ ರಾಜೇಶ ಅವನಿಗೆ ಕರೆ ಮಾಡಿ ಟಿವಿ ಚಾನೆಲ್ ನೋಡು ಎಂದನು ಮನಸ್ಸು ಇಲ್ಲದೆ ಅವನ ಬಲವಂತಕ್ಕೆ ನೋಡಿದ ತಕ್ಷಣ ಅವನಿಗೆ ಕಾದಿತ್ತು ಆಘಾತ……..….
ಏನು ಅಂತೀರಾ........ಶ್ರೀರಾಮ್ ಪ್ರೀತಿಸಿ ಮದುವೆಯಾಗಿ ಕಾರಣಾಂತರಗಳಿಂದ ದೂರವಾಗಿದ್ದ ಪ್ರೀತಿ ಇದು….ಟಿವಿ ಚಾನಲ್ ಅಲ್ಲಿ ಬರುತ್ತಿದ್ದ ವಿಷಯ ಬೇರೆ ಯಾರದ್ದೊ ಅಲ್ಲ ತಾನು ಪ್ರೀತಿಸಿ ತಾಳಿ ಕಟ್ಟಿದ ಹುಡುಗಿ ಜನ ಪ್ರಸಿದ್ಧ ಜನ ಸೇವಕ ಸಿದ್ಧಾರ್ಥ ಪಾಟೀಲ್ ಅವರ ಮಗಳು ಮೈಥಿಲಿ ಸಿದ್ದಾಂತ್ ಪಾಟೀಲ್……….ಮದುವೆ ಸಂಭ್ರಮ..
ಇವಳು ಪಾಟೀಲ್ ಕುಟುಂಬಕ್ಕೆ ಸೇರಿದ ಒಬ್ಬಳೇ ಮಗಳು……….ಇವರ ಅಪ್ಪ ಸಿದ್ಧಾರ್ಥ ಮತ್ತು ದೊಡ್ಡಪ್ಪ ದೊಡ್ಡ ಬಿಜಿನೆಸ್ ಮ್ಯಾನ್ ಸಿದ್ದಾಂತ್ ಪಾಟೀಲ ರವರು ಇಬ್ಬರು ಅವಳಿ ಮಕ್ಕಳು………ದೊಡ್ಡವರಾದ ….ಸಿದ್ದಾಂತ್ ಪಾಟೀಲ್ ಮತ್ತು ಪಂಕಜಾ ಪಾಟೀಲ್ ಅವರಿಗೆ ಇಬ್ಬರು ಅವಳಿ ಗಂಡು ಮಕ್ಕಳು ಅರುಣ್ ಪಾಟೀಲ್, ವರುಣ್ ಪಾಟೀಲ್ ಇವರು ಅಮೆರಿಕದಲ್ಲಿ ಕೆಲಸ ನೋಡಿಕೊಳ್ಳುತ್ತಿದ್ದರು…….ತನ್ನ ಸಹೋದರರ ಬಳಿ ಪೋನ್ ಮೂಲಕ ಮಾತನಾಡುತ್ತಿದ್ದರು …ಇನ್ನು ಸಿದ್ಧಾರ್ಥ ಪಾಟೀಲ್ ಮತ್ತು ಕಲ್ಪನಾ ಪಾಟೀಲ್ ಅವರಿಗೆ ಮೊದಲಿಗೆ ಇಬ್ಬರು ಅವಳಿ ಗಂಡು ಮಕ್ಕಳಾದ ಹರೀಶ್ ಮತ್ತು ಗಿರೀಶ್ ಪಾಟೀಲ್ ಎಂಬ ಮಕ್ಕಳಿದ್ದರು……….ನಂತರ ಅವರಿಗೆ ಒಬ್ಬ ಮಗಳು ಜನಿಸಿದಳು….ಅವಳೆ ಕುಟುಂಬದವರಿಗೆಲ್ಲ ಮುದ್ದು ಮಗಳು……ಮೈಥಿಲಿ ಸಿದ್ಧಾರ್ಥ ಪಾಟೀಲ್ ಇವಳೇ ನಮ್ಮ ಕಥಾ ನಾಯಕಿ ………
ಶ್ರೀರಾಮ್ ಗೆ ಕಾದಿದ್ದ ವಾರ್ತೆ ಮತ್ತೆನು ಅಲ್ಲ….”ಪಾಟೀಲ್ ಕುಟುಂಬಕ್ಕೆ ಸೇರಿದ ಒಬ್ಬಳೆ ಮಗಳ ಮದುವೆ ಸಂಭ್ರಮ”….ಎಂದು ಕಂಡ ತಕ್ಷಣ ಅವನ ಕಣ್ಣಲ್ಲಿ ನೀರು ತುಂಬಿತ್ತು………ಇಷ್ಟು ದಿನಗಳ ಕಾಲ ನಿನ್ನ ಹುಡುಕದ ಜಾಗವಿಲ್ಲ…….
ಎಲ್ಲಿದೆ ಇಲ್ಲಿಯವರೆಗೆ ಎಂದು ಕಣ್ಣೀರು ಸುರಿಸುತ್ತಾ ಮದುವೆ ಮನೆಯನ್ನು ತೆರೆದು ಗುಬ್ಬಿಮರಿಗಾಗಿ..ಮೈಸೂರುನ ಕಡೆ ಯಾರಿಗೂ ತಿಳಿಸದೆ…..ಹೊರಟ…….
ಇಲ್ಲಿ ಮನೆ ಅವರಿಗೆಲ್ಲ ಗಾಬರಿಯಾಗಿ ಮದುವೆ ಮನೆಯಾಗಿದ್ದ ದೊಡ್ಡ ಮನೆ ಸೂತಕ ತುಂಬಿದ ಮನೆ ರೀತಿ ಆಗಿದ್ದು ಸತ್ಯ…..
ಅಲ್ಲಿ ಮಂಟಪದಲ್ಲಿ ಕೂಗಿದ್ದ ಮಿಸ್ಟರ್ ಆಕಾಶ್ ದೇಸಾಯಿ ಇವರು ಮೈಥಿಲಿ ಬಾಲ್ಯ ಗೆಳೆಯ ಸಿದ್ದಾಂತ್ ಪಾಟೀಲ್ ಅವರ ಸ್ನೇಹಿತರಾದ ವಿನಾಯಕ್ ದೇಸಾಯಿ ಅವರ ಮಗ ಯುತ್ ಐಕಾನ್ ಆಕಾಶ್ ದೇಸಾಯಿ ಇವನ ಜೊತೆ ಮದುವೆ ನಿಶ್ಚಯವಾಗಿತ್ತು………
ಮೈಥಿಲಿ ಯ ಬರುವಿಕೆಗಾಗಿ ಕಾದು ಕೂತಿದ್ದ ಆಕಾಶ್ ಮತ್ತು ಅವರ ಕುಟುಂಬದವರಿಗೆ ಏನೋ ಸಾಧಿಸಿಬಿಟ್ಟೆವು ಎಂಬ ಹೆಮ್ಮೆಯ ನಗು ,,,,,,
ಮೈಥಿಲಿ ಯ ನಿಲುವು ಹಾಲು ಬಿಳುಪಿನ ಮೈ ಬಣ್ಣ,,,,ಉದ್ದ ಕೂದಲಿಗೆ ಮಲ್ಲಿಗೆ ಹೂವಿನ ಜಡೆ, ಬೈತಲೇ , ಕಣ್ಣಿಗೆ ಸ್ವಲ್ಪ ಹೆಚ್ಚಾಗೆ ಹಚ್ಚಿದ್ದ ಕಾಡಿಗೆ,,,,,, ಮತ್ತು ಕೋಮಲ ತುಟಿಗಳಿಗೆ ಸ್ವಲ್ಪವೇ ಲಿಫ್ಟ್ಕ್,,,,ಇಷ್ಟೆ ಅಲ್ಲದೆ.. ಹಣೆಗೆ ಬಾಸಿಂಗ,,,,,,ಸೀರೆಗೆ ತಕ್ಕ ಚಿನ್ನದ ಒಡವೆಗಳು,,,ಇಷ್ಟೆಲ್ಲ ಇದ್ದರೂ ಶ್ರೀರಾಮ್ ಗೆ ತನ್ನ ಗುಬ್ಬಿಮರಿಯ ಮುಖದ ಮೇಲೆ ನಗು ಕೊರತೆಯಾಗಿದ್ದು……ಖಂಡಿತ ಆ ಒಡವೆಗಳ ಮಧ್ಯೆ ಕಾಣದೆ ಬಚ್ಚಿಟ್ಟಿದ್ದ ಶ್ರೀರಾಮ್ ಕಟ್ಟಿದ ಅವನ ಹೆಸರಿನ ತಾಳಿ………ಆ ನಗು ಮರೆತು ದಿನಗಳೆ ಕಳೆದು ಹೋಗಿದ್ದವು.
ಅವರ ಅಣ್ಣಾಂದಿರಿಗೆ ಮಾತ್ರ ತಿಳಿದಿತ್ತು ಅವಳ ವೇದನೆ……….ಆ ಈಡಿಯಟ್ ರಾಮ್ ನನಗೆ ಇಷ್ಟವಿಲ್ಲ ಎಂದೂ ಅದೆಷ್ಟು ಸಲ ಹೇಳಿದ್ದಳೋ ಅವರ ಬಳಿ ಲೆಕ್ಕವಿರಲಿಲ್ಲ ….. ಆದರೂ ಭಯ ಕುಟುಂಬದವರಿಗೂ,, ಆಕಾಶ್ ಗೆ ಮೋಸ ಮಾಡುತ್ತಿದ್ದೆನೋ ಎಂಬುದು ಅವಳನ್ನು ಕಾಡುತ್ತಿತ್ತು.
ಶ್ರೀರಾಮ್ ಇಲ್ಲೆ ಎಲ್ಲೋ ಇದ್ದಾನೆ ಎಂಬುದು ಅವಳಿಗೆ ತಿಳಿದದ್ದು ನಿಜ….ಅದು ನಿಜವೇ ಅಲ್ಲವೇ ಅವಳ ರಾಮ್ ಅಲ್ಲಿಯೇ ಇದ್ದ……ಅವಳ ಹೃದಯಕ್ಕೆ ತಿಳಿಯದೆ ಇರುವುದೇ ಅಷ್ಟು ಪ್ರೀತಿಸಿದ ಹುಡುಗಿ…..ಅವಳನ್ನೇ ಗಮನಿಸುತ್ತಿದ್ದವು ಅವಳ ಇಷ್ಟವಾದ ಅವನ ಕಣ್ಣುಗಳು…
ಅವಳು ಬಲದಿಂದಲೇ ಬಂದು ಮಂಟಪದಲ್ಲಿ ನಿಂತಳು……ಆಕಾಶ್ ಗೆ ಎಲ್ಲಿಲ್ಲದ ಉತ್ಸಾಹ ಅವಳನ್ನು ನೋಡಿ ಕಳೆದು ಹೋದ…..ಇದನ್ನು ಕಂಡ ರಾಮ್ ಗೆ ಅವನ ದೃಷ್ಟಿ ಕಂಡು ಕೋಪ……..ಪುರೋಹಿತರು ಗಟ್ಟಿಮೇಳ ಅಂದ ಕೂಡಲೇ ತಂದಿದ್ದ ತಾಳಿಯನ್ನು ಮತ್ತೊಮ್ಮೆ ಕಟ್ಟಿದ …..ಅದನ್ನು ನೋಡಿದ ಆಕಾಶ್ ಮತ್ತು ಅವರ ಕುಟುಂಬದವರಿಗೆ ಕೋಪ……ಅವಳ ಕುಟುಂಬದವರಂತು ಎಲ್ಲಾ ಮುಗಿದು ಹೋದಂತೆ ನಿಂತರು…….ಅವಳ ಅಣ್ಣಾಂದಿರಂತು ಜೀವದ ಗೆಳೆಯ ಮಾಡಿದ್ದು ಜೀವವೇ ಹೋದಂತೆ ನೋಡಿ ಮತ್ತೆ ಅವಳ ನೆಮ್ಮದಿ ಹಾಳು ಮಾಡಲು ಬಂದೆಯ ಎಂದು ಅವನನ್ನು ಕೇಳಲು ನಿಂತರು…..ಶ್ರೀರಾಮ್ ಅಂತು ನಾನು ಮಾಡಿದ ತಪ್ಪನ್ನೂ ಸರಿ ಮಾಡುತ್ತಿರುವೇ ಈಗಾಗಲೇ ಕಟ್ಟಿದ ತಾಳಿ ತೆಗೆದು ತೋರಿಸಿದಾಗ ಎಲ್ಲಾ ಬೆಚ್ಚಿಬಿದ್ದರು.ಆಕಾಶ್ ಕುಟುಂಬದವರು ಈ ತರ ಅನ್ಯಾಯ ಮಾಡಲು ನಮ್ಮನ ಕರೆಸಿದೆಯ ಎಂದು ಅಲ್ಲಿದ್ದ ಹೊರಡುವ ಮೊದಲು ಆಕಾಶ್ ಒಡೆಯಲು ಹೋದಾಗ ಶ್ರೀರಾಮ್ ಸರಿಯಾಗಿ ಬಿಟ್ಟನು. ಅವನು ಸುಮ್ಮನೆ ಹೊರಟರು. ನಂತರ ಶ್ರೀರಾಮ್ ಅತ್ತೆ ಮಾವರ ಬಳಿಗೆ ಬಂದು ನಿಮ್ಮ ಮಗಳನ್ನ ನಾನು ಮೊದಲೇ ಮದುವೆಯಾಗಿದ್ದೆ.ನನ್ನಿಂದ ಆದ ತಪ್ಪು ಸರಿ ಮಾಡಿರುವೆ.ನಿಮ್ಮ ಮಗಳು ಈಗ ನನ್ನ ಹೆಂಡತಿ ಅವಳು ನನ್ನ ಜವಾಬ್ದಾರಿ ಎಂದು ಜ್ಞಾನವೇ ಇಲ್ಲದೆ ಸುಸ್ತಾಗಿ ಬಿದ್ದಿದ್ದ ಅವಳನ್ನು ಎತ್ತುಕೊಂಡ ಕಾರಿನ ಸೀಟಿನ ಮೇಲೆ ಮಲಗಿಸಿ ಯಾವುದೇ ರೀತಿ ಬಯ ಬೇಡ ಅಂಥ ಗೆಳೆಯರಿಗೆ ತಿಳಿಸಿ….ಊರ ಕಡೆ ಗಾಡಿ ತಿರುಗಿಸಿ ಹೊರಟೆ ಬಿಟ್ಟ ಶ್ರೀರಾಮ್ ……..ದಾರಿಯುದ್ದಕ್ಕೂ ಅವಳ ಬಳಿ ನನ್ನ ಕ್ಷಮಿಸಿ ಬಿಡು ಗುಬ್ಬಿ ಎಂಬುದು ಮೊಳಗುತ್ತಿತ್ತು……ಊರು ತಲುಪಿದ ಶ್ರೀರಾಮ್ ಮೈಥಿಲಿಗಾಗಿ ಮನೆ ಬಿಟ್ಟಿದ್ದ….…. ಮನೆಯಲ್ಲಿ ಎಲ್ಲರೂ ಮೌನವಾಗಿ ಕೂತು ಬಿಟ್ಟಿದ್ದರು….ಮೊದಲು ಊರ ದೇವಸ್ಥಾನದಲ್ಲಿ ಅವಳನ್ನು ಎತ್ತುಕೊಂಡ ಬಂದು ನಿಂತ…..ಅವಳಿಗೆ ಎಚ್ಚರವಾಯಿತು ಅವಳ ಕಾಲುಗಳಿಗೆ ಕಾಲುಂಗುರಗಳನ್ನು ತೊಡಿಸಿದ. ಕ್ಷಮಿಸಿ ಬಿಡು ಎಂದ ತುಂಬಾ ಸುಸ್ತಾಗಿದ್ದ ಅವಳು ಮತ್ತೆ ಜ್ಞಾನ ತಪ್ಪಿದಳು…ಮನೆಕಡೆ ಕಾರು ತಿರುಗಿಸಿ ಹೊರಟು ಮನೆ ತಲುಪಿದ…..ಅವನು ಬಂದದ್ದು ಕಂಡ ಎಲ್ಲಾ ಆಚೆ ಬಂದು ನಿಂತರು ಏನು ಕೇಳಲಿಲ್ಲ …ಅವಳ ಸುಂದರ ಮುಖ ಕಂಡು ಅವರು ಸೋತಿದ್ದು ಮಾತ್ರ ನಿಜಕ್ಕೂ ಸತ್ಯ ಅಷ್ಟು ಸೌಂದರ್ಯವತಿ ಅವಳು……..ಆರತಿ ಮಾಡಿ ಮನೆ ತುಂಬಿಸಿಕೊಂಡರು…….ಮನೆಯವರಿಗೆ ನಡೆದ ಘಟನೆ ತಿಳಿಸುವನು ಎಂಬ ನಂಬಿಕೆ …..
ಎಲ್ಲಾ ಹೀಗೆ ವಿವರಿಸಿದನು ಹೇಳುವೆ ಬನ್ನಿ …
ಶ್ರೀರಾಮ್ ತನ್ನ ವಿದ್ಯಾಭ್ಯಾಸಕೆಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಸೇರಿಕೊಂಡ…….ಕಾಲೇಜಿನಲ್ಲಿ ಮೊದಲ ದಿನ ಶ್ರೀರಾಮ್ ನಿಲುವು ಕಂಡು ಕಾಲೇಜು ಹುಡುಗಿಯರು ನಿಂತಲ್ಲೆ ನಿಂತಿದ್ದರು ಅವನ ಸೌಂದರ್ಯಕ್ಕೆ ಸೋತು…..ಮೊದಲ ದಿನ ಕ್ಲಾಸ್ ರೂಂ ಗೆ ಹೋಗಿ ಕುಳಿತುಕೊಂಡನು…ಅದು ಮೊದಲ ದಿನ ಅಲ್ಲವೇ ಯಾರು ಪರಿಚಯ ಇರಲಿಲ್ಲ ಅವನಿಗೆ,,,,ಅವನ ಬಳಿ ಬಂದು ಕುಳಿತರು ಅವರು ಬೇರೆ ಯಾರೂ ಅಲ್ಲ ಮೈಥಿಲಿಯ ಸಹೋದರರು ಹರೀಶ್ ಪಾಟೀಲ್, ಗಿರೀಶ್ ಪಾಟೀಲ್ . ಹಾಯ್ ಎಂದು ಅವರ ಪರಿಚಯ ಮಾಡಿಕೊಂಡು ಅವರ ಕುಟುಂಬದವರ ಬಗ್ಗೆ ಹೇಳಿದರು…ಅವನು ಅವರ ಕುಟುಂಬ ಮತ್ತು ಊರಿನ ವಿವರ ನೀಡಿ ಪರಿಚಯ ಮಾಡಿಕೊಂಡು….ಆ ದಿನ ಹಾಗೆ ಕಳೆದು ಹೋಗಿದ್ದೆ ತಿಳಿಯಲಿಲ್ಲ ಅವರಿಗೆ,,,,,ಅವರ ಮಧ್ಯೆ ತುಂಬಾ ಸಲಿಗೆ ಬೆಳೆಯಿತು. ಶ್ರೀರಾಮ್ ವಿದ್ಯೆಯಲ್ಲು ಮುಂದೆ ಇದ್ದ ಕಾರಣ ಅವರ ಸ್ನೇಹ ಇನ್ನು ಗಟ್ಟಿಯಾಗಿತು. ಹರಿ ಗಿರಿ ಇಬ್ಬರು ಅವನ ಬಳಿಗೆ ಬಂದು ತಿಳಿಯದೆ ಇರುವುದನ್ನು ಹೇಳಿಸಿಕೊಳ್ಳಲು ರೂಂ ಬಳಿಗೆ ಬರುತ್ತಿದ್ದರು. ಇದೆ ರೀತಿ ದಿನಗಳು ಕಳೆದು ಹೋದವು ….ಒಂದು ದಿನ ಶ್ರೀರಾಮ್ ಹರಿ ಮತ್ತು ಗಿರಿ ಗೆ ಅವರ ಕುಟುಂಬದವರ ಬಗ್ಗೆ ಕೇಳಿದ… ಆಗ ಹರಿ ನಮ್ಮದು ತುಂಬಿದ ಕುಟುಂಬ ..ಎಂ. ಪಿ ಗ್ರೂಪ್ ..ನ ಅಪ್ಪ ದೊಡ್ಡಪ್ಪ ಇಬ್ಬರು ನೋಡಿಕೊಳ್ಳುತ್ತಿದ್ದಾರೆ,,,,ಅಮ್ಮ ದೊಡ್ಡಮ್ಮ ಮನೆಯಲ್ಲಿ ಇದ್ದು ನಮ್ಮ ಆರೈಕೆ ಮತ್ತು ನಮ್ಮ ಮುದ್ದು ತಂಗಿ ಗುಬ್ಬಿಮರಿ ಯನ್ನ ನೋಡ್ಕೊತಾ ಇದ್ದಾರೆ……ನಮ್ಮೆಲ್ಲರ ಪ್ರೀತಿಯ ಗುಬ್ಬಿಮರಿ..ಅವಳ ಮೇಲೆ ನಮ್ಮ ಕುಟುಂಬದವರಿಗೆ ತುಂಬಾ ಪ್ರೀತಿ,,,,,,,,,ಅವಳಿಗೂ ಅಷ್ಟೆ ನಾವೇ ಪ್ರಪಂಚ……ಅವಳನ್ನ ನಾವೆಲ್ಲ ರಾಜಕುಮಾರಿ ತರ ಬೆಳೆಸಿದ್ದಿವಿ…ನಮ್ಮ ಜೀವನದಲ್ಲಿ ಅವಳೆ ನಮಗೆ ಮೊದಲ ಪ್ರೀತಿ..ಅವಳನ್ನು ಹೊರತು ಪಡಿಸಿ ಇದುವರೆಗೂ ಯಾವ ಹುಡುಗಿಯರನ್ನು ಹತ್ತಿರ ಸುಳಿಸಿಲ್ಲ….ಅವಳು ಅಷ್ಟೆ ನಮ್ಮನ್ನ ಬಿಟ್ಟು ಯಾವ ಹುಡುಗರು ಕೂಡ ಪರಿಚಯವೇ ಇಲ್ಲ ಅವಳಿಗೆ,,,,,ಈ ತರ ಗುಣ ಇರುವ ತಂಗಿಯ ಪಡೆದ ನಾವೇ ಅದೃಷ್ಟವಂತರು ಎಂದರು….… ಸಮಯ ತಿಳಿಯದೆ ರಾತ್ರಿ ಆಗಿತ್ತು…ಇನ್ನು ಮನೆಗೆ ಬಂದಿಲ್ಲ ಅಂತ ಒಂದೇ ಸಮನೆ ಗುಬ್ಬಿಮರಿ ಕರೆ ಮಾಡಿ ಸಾಕಾಗಿ ಹೋಗಿತ್ತು…ಅವರು ಕರೆ ನೋಡಿ ಅಲ್ಲಿಂದ ಹೊರಟು ಮನೆಗೆ ಬಂದರು……..ಅವಳು ಕೋಪ ಮಾಡಿಕೊಂಡು ತನ್ನ ರೂಮಿನ ಒಳಗೆ ಸುಮ್ಮನೆ ಕೂತಿದ್ದಳು…ಅಣ್ಣಾಂದಿರಿಗೆ ತಿಳಿದಿತ್ತು ಅವಳ ಕೋಪ……ಜೋರಾಗಿ ಕೂಗುತ್ತಾ ಆವಳ ರೂಮಿಗೆ ಬಂದರು ಮುದ್ದು ಗುಬ್ಬಿಮರಿ ಅಂತ…..ಅವಳ ಕೋಪ ಅವರು ಬರುವವರೆಗೂ ಮಾತ್ರವೇ………ಸಮಾಧಾನ ಮಾಡಿ ಸ್ನೇಹಿತನ ಬಗ್ಗೆ ಹೇಳುತ್ತಾ ಮಲಗಿಸಿದರು….
ಬೆಳಗ್ಗೆ ಎದ್ದು ಶ್ರೀರಾಮ್ ಜೊತೆ ಕಾಲೇಜಿಗೆ ಬಂದರು……..ದಿನಗಳು ಕಳೆದು ಹೋದವು…..ಮೈಥಿಲಿ ಮೊದಲೇ ಸುಂದರಿ ಅವಳು ಬಿಳಿ ಬಣ್ಣದ ಚೂಡಿದಾರ್ ತೊಟ್ಟು ಕಾಲೇಜು ಕಡೆ ಹೊರಟೆ ಬಿಟ್ಪಳು…..ತಡವಾಗಿ ಎದ್ದ ಕಾರಣ ತಿಂಡಿಯನ್ನು ತಿನ್ನದೆ… ಅವಳು ತುಂಬಾ ಸುಂದರವಾಗಿ ಕಾಣುತ್ತಿದ್ದಳು,,,,ಉದ್ದವಾಗಿ ಬಿಟ್ಟ ಕೂದಲು…….ತುಂಬ ತೆಳ್ಳಗೆ ಇದ್ದರೂ ಸುಂದರಿಯೇ ಇವಳು…ಅಲ್ಲೇ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿ ಬರುವ ರೂಢಿ ಅವಳದ್ದು ಬಂದಿದ್ದಳು..ದೇವರ ಬಳಿ ಏನೋ ಪ್ರಾರ್ಥನೆ ಮಾಡುತ್ತ ನಿಂತಳು…..ಅದೇ ದೇವಾಲಯಕ್ಕೆ ನಮ್ಮ ಹಿರೋ ಕೂಡ ಬಂದು ನಿಂತ………ಇಲ್ಲೆ ನಮ್ಮ ಹಿರೋ,,,,,,ಹಿರೋಹಿನ್ ಮೊದಲ ಭೇಟಿ…………ಬನ್ನಿ ನಿಮಗೂ ಸ್ವಲ್ಪ ಓದಿ ಸುಸ್ತಾಗಿದೆ ಅನಿಸುತ್ತೆ ಅಲ್ವಾ………ಒಂದು ಬ್ರೇಕ್ ಅಂತು ತೆಗೆದು ಕೊಳ್ಳಲು ಇದೇನೂ ಸಿನಿಮಾ ಅಲ್ಲ ಅಲ್ವಾ……….
ನಾನು ನಿಮ್ಮ್ ಬಳಿ ಒಂದ್ ಮಾತು ಕೇಳುವೇ…….ನಿಮಗೆ ಅಂದರೆ ಯಾರು ಅಂತೀರಾ ಗುರು….. ನೀವೆ ಈ ಕಥೆನ ಒಂದ್ ಸಾಲು ಬಿಡದೆ ಓದುತ್ತಿರುವ ನಿಮಗೇನೆ……. ನಮ್ ಕಥೆ ನಾಯಕ,,ನಾಯಕಿ ಬಗ್ಗೆ ಹೇಳುವೆ ಮುಂದೆ….ಇಲ್ಲಿ ಹೇಳಿ ಮೊದಲು ನಿಮ್ಮ ಮೊದಲ ಪ್ರೇಮದ ಬಗ್ಗೆ ನೆನಪು ಮಾಡಿಕೊಳ್ಳಿ……..ಅದೆ ರೀ ನೀವು ಶಾಲೆಗೆ ಹೋಗುವಾಗ……ಆದ ಪ್ರೇಮ…..ನನಗೆ ಹೇಗೆ ಗೊತ್ತು ಅಂತ ಜಾಸ್ತಿ ಯೋಚನೆ ಮಾಡ್ತಾ ಕೂರಬೇಡಿ …… …….ಆಆಆಆಆ ಸಾಕು ಅಷ್ಟೆ……ಮುಂದೆ ಕನಸು ಕಾಣುತ್ತ ಪ್ಲ್ಯಷ್ ಪ್ಯಕ್ ಗೆ ಹೋಗಿ ನನ್ನ ಕಥೆ ಅರ್ಧಕ್ಕೆ ನಿಲ್ಲಿಸಿ ಸುಮ್ಮನಾಗಬೇಡಿ ಸ್ವಾಮಿ….ಏನೋ ಕಥೆ ಬರೀತಾ ಇರೋದು ವಿದ್ಯಾರ್ಥಿ ಅಲ್ವಾ ಅಂತ……..ಮೂರ್ತಿ ಚಿಕ್ಕದಾದರು …………ಮುಂದಕ್ಕೆ ನಿಮಗೂ ಗೊತ್ತು ಬಿಡಿ……..ಸಾಕು …..……. ನಿಲ್ಲಿಸಿ ನಾನು ಓದುಗರಿಗೆ ಬೇಜರ್ ಆಗಬಾರದು ಅಂತ ಅಷ್ಟೆ …..ಮತ್ತೆ ನಿಮ್ ಹಳೆಯ ಲವ್ ಸ್ಟೊರಿ ನೆನಪು ಮಾಡ್ಕೊಂಡ್ರ ಪಾಪ ಅವರು ಎಲ್ಲಿ ಇದರೊ ಏನೋ ಇಲ್ಲ ಮದುವೆ ನೇ ಆಗೊದ್ರೊ ಏನೋ ನೆನಪು ಮಾಡಿ ಬೇಜಾರ್ ಮಾಡ್ದೆ ಅನ್ಸುತ್ತೆ ಕ್ಷಮಿಸಿ…….ಅಂತ ಏನ್ ಕೇಳಲ್ಲ ನಾನು……ಈಗ ನನ್ ಸ್ಟೊರಿ ಗೆ ಬನ್ನಿ ಆಮೇಲೆ ನೆನಪ್ ಮಡ್ಕೊಳ್ಳಿವ್ರಂತೆ………..
Image by Pexels from Pixabay
ಎಲ್ಲಿಗೆ ನಿಲ್ಲಿಸಿದ್ದೆ ನಮ್ಮ ಕಥೆ….ಆ ರೀ ನೆನಪು ಆಯ್ತು ಈಗ…….ನೋಡಿ ನಮ್ ನಾಯಕ(ಶ್ರೀರಾಮ್),,,ನಾಯಕಿ (ಮೈಥಿಲಿ)……….ಇಂದ ಪ್ರಾರಂಭ ಮಾಡ್ಬೇಕು….. ಬನ್ನಿ….ಹೇಳ್ತೀನಿ…ಕೇಳಿ….ಅವರ ಮೊದಲ ಭೇಟಿ ಇದು. ಇಲ್ಲಿ ರಾಮ್ ಮಾತ್ರ ಮುದ್ದು ಹುಡುಗಿ ಮೈಥಿಲಿ ಪಾಟೀಲ್ ನ ಸ್ನೇಹಿತನ ಮುದ್ದು ತಂಗಿ ಇವಳೆ ಎಂದು ತಿಳಿಯದೆ ಅವಳನ್ನು ನೋಡಿ ಆಗಲೇ ಸೋತು ಹೋಗಿದ್ದ ಅವನು……. ಆಕೆಯ ಸೌಂದರ್ಯ ಹಾಗೇ ಇತ್ತು…….ಆದರೆ ಆಕೆಯ ಮುಖವನ್ನೇ ನೋಡದೆ ಅರ್ಧ ಸೋತಿದ್ದ ……ಅವಳು ಅಲ್ಲಿ ಇದ್ದ ಮಕ್ಕಳ ಬಳಿ ನಡೆದು ಕೊಳ್ಳುವ ರೀತಿ ಆಗಿತ್ತು……..ಸೊತಿತ್ತು ಮನ…ಇಲ್ಲಿ ನಮ್ಮ ನಾಯಕ ಅವಳ ರೂಪಕ್ಕೆ ಸೋತಿದ್ದು ಆಗಿತ್ತು. ಅವ ಅವಳನ್ನೆ ನೋಡುತ್ತಾ ಅಲ್ಲೆ ಮುಂದೆ ಇದ್ದ ದೇವಸ್ಥಾನದ ಕಲ್ಯಾಣಿಗೆ ಹಾರಿ ಬಿದ್ದಿದ್ದ ಇದೆ ಅದನ್ನು ನೋಡಿ ಅವಳು ನಕ್ಕಿದ್ದಳು….ಅಲ್ಲಿಂದ ಅವರ ಪರಿಚಯ……ಪದೇಪದೇ ಅದೆ ದೇವಾಲಯದಲ್ಲಿ ಅವರ ಬೇಟಿ……..ಸುಮ್ಮನೆ ತಮ್ಮ ಪಾಡಿಗೆ ತಾವು ಹೋಗಿ ಬರುತ್ತಿದ್ದರು ಇಬ್ಬರು ಸಮಯ ಸಿಕ್ಕಾಗ……ಆದರೆ ಒಬ್ಬರಿಗೋಬ್ಬರು ಮಾತಡಿದ್ದು ಇಲ್ಲ,,, ಮೈಥಿಲಿ ಅವನನ್ನು ಹುಡುಕುತ್ತಿದ್ದಳು …ಆದರೆ ಅವನ ಸಿಗುತ್ತಿರಲಿಲ್ಲ … ಕಾರಣ ಅವನು ವಿದ್ಯಾಭ್ಯಾಸದ ಕಡೆಗೂ ಗಮನ ಕೊಡಬೇಕೆಂದು ನಿರ್ಧರಿಸಿ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದ ಇವನ ಜೊತೆ ಹರಿ ಗಿರಿ ಕೂಡ ಇದ್ದರು. ಅವನಿಗೆ ಅವಳ ಮೇಲೆ ಕ್ರಶ್ ಆಗಿದ್ದಂತು ನಿಜ. …ಕೆಲವು ಬಾರಿ ಅವಳನ್ನು ಆ ದೇವಸ್ಥಾನದ ಮಕ್ಕಳ ಜೊತೆ ಜೊತೆಗೆ ನೋಡುತ್ತಿದ್ದ ….ಕಾರಣ ಅವಳ ಮೇಲೆ ಪ್ರೀತಿಯಾಗಿತ್ತು ಅವನಿಗೆ….ಅವಳು ಕೂಡ ಅವನನ್ನು ಗಮನಿಸುತ್ತಿದ್ದಳು………ಅವಳು ಕೂಡ ಅವನ ನೋಟಕ್ಕೆ ನಿಜವಾಗಿ ಸೋತಿದ್ದಳು…..ಇಷ್ಟು ದಿನ ಅವಳಿಗೆ ಈ ರೀತಿ ಭಾವನೆ ಯಾರ ಮೇಲೂ ಬಂದಿರಲಿಲ್ಲ…….ಅವನು ನಡೆದು ಕೊಳ್ಳುವ ರೀತಿಗೆ ಹರಿ ಗಿರಿ ಅವನ ಬಳಿಗೆ ಬಂದು ಕೇಳಿದಾಗ ಅವನ ಪ್ರೀತಿಯ ವಿಷಯ ಹೇಳಿಕೊಂಡಿದ್ದನು…ಅವನ ಪ್ರೀತಿ ಯ ವಿಷಯ ಅವನ ಸ್ನೇಹಿತರಾದ ಹರಿ, ಗಿರಿ ,ರಘು, ಅಭಿ ಎಲ್ಲರಿಗೂ ತಿಳಿಯಿತು…..ನಂತರ ಅವರು ಭರವಸೆ ಕೊಟ್ಟಿದ್ದರು ನಮ್ಮ ಸಹಾಯ ನಿನಗೆ ಎಂದಿಗೂ ಇದೆ ಅಂತ….. ಒಂದು ದಿನ ಶ್ರೀರಾಮ್ ಅತ್ತೆ ಮಗಳು ಸ್ನೇಹ ಅವನನ್ನು ನೋಡಲೆಂದು ಬಂದ ಕಾರಣ ಅವನ ಎಲ್ಲಾ ಸ್ನೇಹಿತರ ಪರಿಚಯ ಅವಳಿಗಾಗಿತ್ತು …. . ಅವರು ಯಾರು ಸಿಕ್ಕರು ಚೆನ್ನಾಗಿ ಮಾತನಾಡಿಸುತ್ತಿದ್ದರು ಅವಳನ್ನ…..ರಾಜೇಶ್ ಸ್ನೇಹಳ ಮೇಲೆ ಲವ್ ಆಗಿತ್ತು…..ಅವಳ ಬಳಿ ಎಲ್ಲಾ ಹೇಳಿಕೊಂಡಿದ್ದ ಆದರೆ ಸ್ನೇಹ ನಿರಾಕರಿಸಿ ಅವಳು ಶ್ರೀರಾಮ್ ನನ್ನು ಇಷ್ಟ ಪಡುತ್ತಿರುವುದನ್ನು ಅವನ ಬಳಿ ಹೇಳಿಕೊಂಡಳು…..ಅವನು ಬೇಸರಗೊಂಡ…ಆದರೆ ಶ್ರೀರಾಮ್ ಬೇರೆ ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿದಾಗ ಅವಳಿಗೆ ಗಾಬರಿಯಾಗಿ ಅಲ್ಲಿಂದ ಹೊರಟು ಮನೆಗೆ ಹೋದಳು…………ನಂತರದ ದಿನ ಸ್ನೇಹ ರಾಜೇಶ್ ಜೊತೆ ಮಾತನಾಡಲೆಂದೇ ಬಂದಳು ಶ್ರೀ ಗೆ ತಿಳಿಸದೆ…….ಅವಳು ಅವನ ಬಳಿ ಮೊಸಳೆ ಕಣ್ಣೀರು ಸುರಿಸಿ ಅವನನ್ನು ನಂಬಿಸ್ಸಿದ್ದಳು. ……..ರಾಜೇಶ್ ಅವಳ ಮಾತುಗಳನ್ನು ನಂಬಿ ಶ್ರೀರಾಮ್ ಗೆ ಅವಳ ಮೇಲೆ ಅಂದ್ರೆ ನಮ್ ಮೈಥಿಲಿ ಮೇಲೆ ದ್ವೇಷ ಬರುವ ರೀತಿ ಮಾಡುವುದಾಗಿ ಅವಳಿಗೆ ಭರವಸೆ ನೀಡಿದ ಕಾರಣ ಅವಳು ತೋರಿಸಿದ ಸಾಕ್ಷಿ ಆಗಿತ್ತು…… ಅಲ್ಲಿಂದ ಹೊರಟ ಶ್ರೀರಾಮ್ ಬಳಿಗೆ……ನಂತರ ಇವನು ಅವನ ಮನಸ್ಸಿನಿಂದ ಆ ಹುಡುಗಿನ್ನು ಯಾವ ರೀತಿ ದೂರ ಮಾಡಬೇಕು ಎಂದು ಯೋಚನೆಗಿಳಿದನು……ಒಂದು ದಿನ ಮೈಥಿಲಿ ತನ್ನ ಅಮೆರಿಕದಲ್ಲಿ ಇದ್ದ ಅಣ್ಣಾಂದಿರು ಹಾಗು ಹರಿ ಗಿರಿ ಬಳಿ ತನ್ನ ಪ್ರೀತಿಯ ವಿಷಯ ಹೇಳಿದಳು……ಅವರಿಗೆಲ್ಲ ಹಬ್ಬ ಪ್ರೀತಿಯ ಗುಬ್ಬಿಮರಿ ತನ್ನ ಪ್ರೀತಿಯ ವಿಷಯ ನಮ್ಮ ಬಳಿ ಹೇಳುತ್ತಿರುವುದು ಖುಷಿಯಾಯಿತು ಅವರಿಗೆಲ್ಲ……. ಅರು ವರು ಗಂತು ಏನೋ ಸಾಧಿಸಿ ಬಿಟ್ಟೆವು ಎಂದು ಜೋರಾಗಿ ಕೂಗಾಡಿದರು…..ಹೇಳು ಗುಬ್ಬಿ ನಮ್ಮ ಭಾವ ಹೇಗೆ ಇದ್ದಾರೆ ಅಂತ………ಎಂದನು ಹುಡುಗಿ ನಾಚಿ ನೀರಾದಳು ಎಲ್ಲಾ ನಕ್ಕರು……….ಸರಿ ಬಿಡು ನಾವೇ ನೋಡುತ್ತೇವೆ……..ಎಂದ ಅರು…..
ಸರಿ ಯಾವಾಗ ಪ್ರಪೊಸ್ ಮಾಡ್ತ್ತಿಯ ಹೇಳು ಎಂದ ಗಿರಿ……..ಅಣ್ಣಾ…….ನಾನಾಆಆಆಆಆಆಆ ಎಂದು ರಾಗ ಎಳೆದು….ನೋಡುವ ಎಂದಳು….....ಮೊದಲು ನೀನೆ ಪ್ರಪೊಸ್ ಮಾಡ್ಬೇಕು …ಎಂದ ಹರಿ ..ಆಗ ಅವನು ಒಪ್ಪಿದೆ ಹೋದ್ರೆ ಅಂದಳು …….ಸುಂದರಿ…ಯಾಕೆ ಒಪ್ಪಿಲ್ಲ….. ಅವನು ಒಪ್ಪಲ್ಲ ಅಂದ್ರೆ ನಾವೇ ಹೊತ್ತು ಕೊಂಡು ಬಂದು ಮದುವೆ ಮಾಡುಸ್ತಿವಿ ಎಂದ ವರುಣ್…….ಹೌದು ಎಂದರು ಮೂವರೂ……..ಸರಿ ನಾಳೆನೆ ಹೇಳುವೆ………ಅವನಿಗೆ ಎಂದು ಪೋನ್ ಕಟ್ ಮಾಡಿದಳು ಆತುರದಲ್ಲಿ ನಾಳೆಗೆ ಪ್ರಿಪೇರ್ ಮಾಡೋಕೆ ………..ಎಂದು…..ಆವತ್ತಿನ ಬೆಳ್ಳಂಬೆಳಗ್ಗೆ ಎದ್ದು ಎಲ್ಲಿಗೋ ಹೊರಟಂತ್ತಿತ್ತು ಮುದ್ದು ತಂಗಿ ಗುಬ್ಬಿಮರಿ…….ಅಣ್ಣಾಂದಿರಿಗೆ ಮಾತ್ರ ತಿಳಿದಿತ್ತು. ಅಲ್ ದ ಬೆಸ್ಟ್ ಎಂದಿದ್ದರೂ ಮುಂಚಿತವಾಗಿ ನಾಲ್ಕು ಜನ…..ತಮ್ಮ ಸ್ನೇಹಿತ ಶ್ರೀರಾಮ್ ನೇ ಅವಳ ಮನಸ್ಸು ಕದ್ದಿರುವ ಚೋರ ಎಂಬದು ಅವರಿಗೆ ಊಹೆ ಕೂಡ ಇರೋಲ್ಲ….. ….ಶ್ರೀರಾಮ್ ಗಾಗಿ ಕಾಯುತ್ತಾ ಕುಳಿತಿದ್ದಳು……ಮೈಥಿಲಿ ಅವನಿಗೂ ಕೂಡ ಸ್ನೇಹಿತರೆಲ್ಲರೂ ಸೇರಿ ಪ್ರಪೊಸ್ ಮಾಡೋಕೆ ಹೇಳಿ ಕಾಲೇಜಿನಲ್ಲಿ ಅವನ ಬರುವಿಕೆಗಾಗಿ ಕಾದು ಕೂತಿದ್ದರು……ಇತ್ತ ಮೈಥಿಲಿ ಕೂಡಾ ಅವನಿಗಾಗಿ ಕಾಯುತ್ತಾ ಕುಳಿತಿದ್ದಳು …….ಅವನು ಕೂಡ ಅದೇ ವಿಷಯ ಮಾತನಾಡುವ ಸಲುವಾಗಿ ಬಂದು ನಿಂತಿದ್ದ .. ಅವನು ಬಂದ ಕೂಡಲೇ ಮಂಡಿ ಮೇಲೆ ಕೂತ ಹುಡುಗಿ ಐ ಲವ್ ಯು ಎಂದಿತ್ತು ……ಅವಳ ಮಾತು ಕೇಳಿ ನಮ್ ಹಿರೋ ಕಳೆದೆ ಹೋದ……..ಅವನೇ ಹೇಳಲು ಬಂದ ವಿಷಯವನ್ನು ಅವಳೆ ಹೇಳಿ ಬಿಟ್ಟಳಲ್ಲ ಖುಷಿ ಆಗೋದ ಹುಡುಗ….ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಅದೆ ಅನ್ನೋ ತರ ಆಗೋಯ್ತು…….ಅವನು ಇನ್ನು ಇದು ಕನಸು ಅಂತಾನೇ ಅಂದುಕೊಂಡು ಇದ್ದ….ಆದರೆ ಇದು ಸತ್ಯ ಆಗಿತ್ತು,,,,,,,ಅವನು ಏನು ಪ್ರತಿಕ್ರಿಯೆ ನೀಡಿದ ಸುಮ್ಮನೆ ನಿಂತು ಬಿಟ್ಟ…….ಅವಳೆ ಎಚ್ಚರಿಸಿದ್ದಳು……ಎಂದು ಅವಳನ್ನೆ ನೊಡುತ್ತ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ…….ಕಾರಿನಲ್ಲಿ ಎಲ್ಲವನ್ನೂ ನೆನೆಯುತ್ತ…….ಸುಮ್ಮನೆ ನಿಂತಿದ್ದ ಅವನನ್ನು ಎಚ್ಚರಿಸಿ ನಿಮಗೆ ಸಮಯ ಬೇಕು ಅನಿಸುತ್ತದೆ…..ನಿಧಾನವಾಗಿ ನಿಮ್ಮ ಉತ್ತರ ತಿಳಿಸಿ ಎಂದು ಅಲ್ಲಿಂದ ಹೊರಟು ಮನೆಗೆ ಬಂದಳು……ಅಲ್ಲಿ ಅಣ್ಣಾಂದಿರಿಗಂತು ವಿಷಯ ತಿಳಿಯುವವರೆಗೂ ನೆಮ್ಮದಿ ಇಲ್ಲ..ಅವಳು ಬಂದ ಕೂಡಲೇ ಎಲ್ಲಾ ವಿಚಾರಿಸಿದರು……ವಿವರಿಸಿ ಹೇಳಿ ರೂಮಿಗೆ ಹೋಗಿ ಸುಮ್ಮನೆ ಕೂತಿದ್ದಳು…………ಇತ್ತ ಶ್ರೀರಾಮ್ ಕೂಡ ಅವಳ ಬಗ್ಗೆ ಚಿಂತೆ ಮಾಡುತ್ತ ಬಂದು ಕುಳಿತ……….ರೂಮಿಗೆ….ಸ್ನೇಹ ಅಂತು ಅವಳಿಗೆ ಉಪಯೋಗವಾಗುವ ರೀತಿ ಕೆಲಸ ಆಗುವ ಹಾಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದಳು.. ……
ರಾಮ್ ಗಂತು……ದಿನ ಕಳೆದದ್ದೆ ತಿಳಿಯಲಿಲ್ಲ……ಕೂತಲ್ಲೆ ನಿದ್ದೆ ಹೋಗಿದ್ದ……..ಮರುದಿನ ಸ್ನೇಹತರು ಅವನನ್ನು ಕಾಣಲು ರೂಮಿಗೆ ಬಂದಾಗಲೇ ಅವನಿಗೆ ಎಚ್ಚರವಾಗಿದ್ದು… .ನಡೆದ್ದುದ್ದೆಲ್ಲ ಹೇಳಿ ತಯಾರಾದ ಅವಳ ಬೇಟಿ ಮಾಡುವ ಸಲುವಾಗಿ….ಅವನ ಪಾಡಿಗೆ ಅವನು ಹೊರಟ……ಅಲ್ಲಿ ಮೈಥಿಲಿ ಕೂಡಾ ಅಣ್ಣಾಂದಿರಿಗೆ ಹೇಳಿಯೇ ಹೊರಟಳು……ಅವನ ಉತ್ತರಕ್ಕಾಗಿ ಹಂಬಲಿಸುತ್ತಿತ್ತು ಅವಳ ಮನ…..ಅಣ್ಣಾಂದಿರಿಗೂ ಅಷ್ಟೆ… ಕಾತುರದಿಂದ ಕಾಯುತ್ತಿದ್ದರು…ಸ್ನೇಹಿತರನ್ನು ಕೂಡ ಬೇಟಿ ಮಾಡಿರಲಿಲ್ಲ ಅವರು ……ಒಂದು ವೇಳೆ ಮಾಡಿದ್ದರೆ ತಿಳಿಯುತ್ತಿತ್ತೆನೊ ಅವಳ ಪ್ರೀತಿ ಅವರ ಪ್ರೀತಿಯ ಗೆಳೆಯನೇ ಎಂಬುದು….ಆದರೆ ವಿಧಿ ಆಟ ಬೇರೆ ಇತ್ತು…ನನ್ನ ಕಲ್ಪನೆಯಲ್ಲಿ….ಕ್ಷಮಿಸಿ
Image by Enrique Meseguer from Pixabay
ರಾಮ್ ಕೂಡಾ ನಡೆದ ವಿಷಯ ಹರಿ ಗಿರಿ ಇಬ್ಬರಿಗೂ ತಿಳಿಸಿರಲ್ಲಿಲ್ಲ……ಕಾರಣ ಅವರು ಸ್ವಲ್ಪ ಬಿಜಿ ಆಗಿದ್ದರು ಅಪ್ಪ ದೊಡ್ಡಪ್ಪ ರ ವ್ಯವಹಾರಕ್ಕೆ ಇವರ ಸಹಾಯ ಅವಶ್ಯಕ……ಇವರು ವಿದ್ಯಾಭ್ಯಾಸದ ಜೊತೆಗೆ ಈ ರೂಢಿ ಇತ್ತು……..ಮೈಥಿಲಿ …..ಶ್ರೀರಾಮ್ ಇಬ್ಬರು ಬೇಟಿ ಆಗಲೆಂದು ಅದೆ ಜಾಗಕ್ಕೆ ಬರುವಾಗ…ಮೈಥಿಲಿ ಬರುವಾಗ…...ಬಾಲ್ಯದ ಗೆಳೆಯ ಆಕಾಶ್ ದೇಸಾಯಿ ಅಪರೂಪಕ್ಕೆ ಸಿಕ್ಕ ಇದೆಲ್ಲಾ ಆಕಾಶ್,ಸ್ನೇಹ,ರಾಜೇಶ್ ಮುಂಚೆನೆ ಪ್ಯ್ಲನ್(PLAN) ಆಗಿತ್ತು………ರಾಮ್ ಹೊರಟ ಎಂದು ರಾಜೇಶ್ ಮೊದಲೆ ಸ್ನೇಹಗೆ ತಿಳಿಸಿದ್ದ…..ಆಕಾಶ್ ಬಂದು ಹಾಯ್ ಮೈಥಿಲಿ….ಹವ್ ಆರ್ ಯು…..ಎಂದ…..ಮೈಥಿಲಿ ಕೂಡಾ ಹಾಯ್ ಆಕಾಶ್…..ಅಯಮ್ ಪೈನ್ ..ವಾಟ್ ಹೇಬ್ವೊಟ್ ಯು…..ಎಂದು ಲೈಟ್ ಆಗಿ ಅಗ್ ಮಾಡಿದ….ಇದನ್ನು ಸ್ನೇಹ ದೂರದಿಂದಲೇ ಅವರ ಫೋಟೊಗಳನ್ನು ಕ್ಯಾಪ್ಚರ್ ಮಾಡುತ್ತಿದ್ದಳು…..ಇತ್ತ ಶ್ರೀರಾಮ್ ಅವಳಿಗಾಗಿ ಕಾಯುತ್ತಾ ಕುಳಿತಿದ್ದ…ಅವನ ಮನಸ್ಸಿನಲ್ಲಿ ಇರುವ ಭಾವನೆಗಳನ್ನು ಹೇಳಿಕೂಳ್ಳಲೆಂದು…….ಅಲ್ಲಿಗೆ ಅವರ ಯೋಜನೆ ಯಶಸ್ವಿಯಾಗಿ ಜರುಗಿತು…….ಆಕಾಶ್ ಅವಳನ್ನ ಬಲವಂತದಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಅವರ ಕುಟುಂಬದವರೊಂದಿಗೆ ಸಮಯ ಕಳೆಯುವ ಹಾಗೆ ಮಾಡಿದ್ದ .ಮೈಥಿಲಿ ಕುಟುಂಬಕ್ಕೂ ಆಕಾಶ್ ಕುಟುಂಬಕ್ಕೂ ಮುಂಚೆಹಿಂದಲು ಪರಿಚಯ ಮತ್ತು ಅವರೆಲ್ಲರೂ ಬಾಲ್ಯ ಸ್ನೇಹಿತರಾಗಿದ್ದರು…. ಎಲ್ಲರ ಸಂತೋಷಕ್ಕಾಗಿ ಅವಳು ಅಲ್ಲೆ ಉಳಿದುಕೊಳ್ಳುವ ಅನಿವಾರ್ಯ…. ಸ್ನೇಹ ಆಕಾಶ್ ಜೊತೆ ಮೈಥಿಲಿ ಇದ್ದಾ ಎಲ್ಲಾ ಫೋಟೊಗಳನ್ನು ಸೆರೆ ಹಿಡಿಯವಲ್ಲಿ ಯಶಸ್ವಿಯಾಗಿ ಮುಗಿಸಿ……ಬಿಟ್ಟಿದ್ದಳು……
ನೀವು ತಿಂಕ್ ಮಾಡ್ತಾ ಇದ್ದೀರಾ ಅಲ್ವಾ….ಆಕಾಶ್ .ಸ್ನೇಹ,,,,ರಾಜೇಶ್ ಗೆ ಏನ್ ಲಾಭ ಅಂತ……ಹೌದು ನಿಮ್ ಯೋಚನೆ ಸರಿ ಇದೆ…..ರಾಜೇಶ್ ಗೆ ಸ್ನೇಹ ಹಾಕುವ ಕಣ್ಣೀರು ಈ ರೀತಿ ಸಹಾಯ ಮಾಡುಬೇಕು ಎಂಬಂತೆ ಮಾಡಿತ್ತು….ಅವನಿಗೆ ತಿಳಿದಿಲ್ಲ ಆಕಾಶ್ ಹಾಗು ಸ್ನೇಹ ಮಾಡಿರುವ ಯೋಚನೆಗಳು……ಇವೆಲ್ಲ ಅವನಿಗೆ ತಿಳಿದಿರಲಿಲ್ಲ…… ಆಕಾಶ್ ಅವನಿಗೆ ಪರಿಚಯವು ಇರಲಿಲ್ಲ…….ಸ್ನೇಹ ಹೇಳಿದ ಹಾಗೆ ಮಾಡುತ್ತಿದ್ದ ಅವಳು ಶ್ರೀರಾಮ್ ನನ್ನು ಇಷ್ಟ ಪಡುತ್ತಿರುವುದಾಗಿ ನಂಬಿಸದ್ದಳು .ಇನ್ನು ಸ್ನೇಹ ದೊಡ್ಡಮನೆ ಸೊಸೆಯಾಗಿ ಮೆರೆಯಬೇಕೆಂಬ ಆಸೆಗೆ ಶ್ರೀರಾಮ್ ಪ್ರೀತಿಯನ್ನು ನಾಶ ಮಾಡಲು ಮುಂದಾಗಿದ್ದಳು .ಇನ್ನು ಆಕಾಶ್ ಆಸ್ತಿ ಆಸೆಗಲ್ಲದೆ ಮೈಥಿಲಿ ಮೇಲಿನ ಮೋಹಕ್ಕಾಗಿ….ಸ್ನೇಹ ಮತ್ತು ಆಕಾಶ್ ಅಲ್ಲದೆ ಸ್ನೇಹ ತಂದೆ ಗುರು ಪ್ರಸಾದ್ ಕೂಡ ಭಾಗಿಯಾಗಿದ್ದರು…ಇಲ್ಲಿ ಶ್ರೀರಾಮ್ ಅವಳಿಗಾಗಿ ಕಾಯುತ್ತಾ ಇನ್ನು ಅಲ್ಲೆ ಕುಳಿತು ಯೋಚನೆ ಮಾಡ್ತಾ ಇದ್ದ ಅವಳ ಬಗ್ಗೆಯೇ…….ಸ್ನೇಹ ಅವನ ಬಳಿಗೆ ಬಂದು….ಯಾಕೆ ಮಾಮ ಹೀಗೆ ಕುತ್ತಿದ್ದಿಯ ಯಾರಿಗೋ ಕಾಯುತ್ತಾ ಕುಳಿತಿದ್ದಿಯ ಅನ್ಸುತ್ತೆ…..ಇಲ್ಲಿ ಯ ಹುಡುಗಿ ರು ಸರಿ ಇಲ್ಲ ಹಣದಾಸೆ ಗಾಗಿ ಏನು ಬೇಕಾದರೂ ಮಾಡುತ್ತಾರೆ ಯಾರ ಜೊತೆ ಬೇಕಾದರೂ ಹೋಗುತ್ತಾರೆ ನಮ್ಮ ಹುಷಾರಲ್ಲಿ ನಾವು ಇರಬೇಕು ಬನ್ನಿ ಅಪ್ಪ ನಿನ್ನ ನೋಡಬೇಕಂತೆ …ಬರಲು ಹೇಳಿದರು ಎಂದರು…..ಎಂದು ಕಿರು ನಗೆ ನಕ್ಕಳು ಅವಳು ಮಾಡಬೇಕಾದ ಕೆಲಸ ಪೂರ್ಣ ಗೊಂಡಿತ್ತು…..ಮೈಥಿಲಿ ಬಗ್ಗೆ ಯೋಚನೆ ಮಾಡುತ್ತಾ ಅವಳ ಜೊತೆಗೆ ಹೊರಟ…
ನಂತರದ ದಿನ ಹೊಟೇಲ್ ನಲ್ಲಿ ಆಕಸ್ಮಿಕವಾಗಿ ಅದೇ ಹುಡುಗಿಯನ್ನ ಬೇರೊಬ್ಬ ಹುಡುಗನ ಜೊತೆಗೆ ನೋಡಿ ….ಸ್ನೇಹ ಹೇಳಿದ್ದು ನಿಜ ಇರಬಹುದು ಎಂದು ಅವಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದ್ದು ನಿಜ.. ಅವಳ ಕುಟುಂಬದವರೆ ಬಲವಂತವಾಗಿ ಆಕಾಶ್ ಜೊತೆಗೆ ಊಟಕ್ಕೆ ಕಳಿಸುವ ಹಾಗೆ ಆಕಾಶ್ ಮಾಡಿದ್ದ..ಇದನ್ನು ಕಂಡ ಶ್ರೀರಾಮ್ ಬೇಸರವಾಗಿ ಕಾಲೇಜಿಗೂ ಹೋಗಿರಲಿಲ್ಲ …ಅದಕ್ಕಾಗಿ ಹರಿ ಗಿರಿ ತುಂಬಾ ದಿನಗಳ ನಂತರ ಶ್ರೀರಾಮ್ ನ ನೋಡಲೆಂದು ಅವನ ರೂಮಿಗೆ ಬಂದಾಗ…..ಅವನು ತುಂಬಾ ಬೇಸರದಿಂದ ಕುತ್ತಿದ್ದ ಅವನನ್ನು ನೋಡಿ ಅವನ ಪ್ರೀತಿಯ ಬಗ್ಗೆ ತಿಳಿದ್ದಿದ್ದ ಅವರಿಗೆ ಏನೋ ಆಗಿದೆ ಎಂದು ಅರಿಯಲು ಸಮಯ ಬೇಕಾಗಿರಲಿಲ್ಲ …….ನಡೆದ್ದುದ್ದೆಲ್ಲ ತಿಳಿಸಿ ಸಂಕಟ ಪಟ್ಟನು…. ನಿನ್ನ ಪ್ರೀತಿಗೆ ಮೋಸ ಮಾಡಿದ ಅವಳಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿ ಯೋಚನೆ ಮಾಡ್ತಾ ಅಲ್ಲೆ ಕೂತರು……. ಸಮಯ ಸಂಜೆ ಆಗಿತ್ತು ಅದರ ಬಗ್ಗೆ ಚರ್ಚೆ ಮಾಡುತ್ತ ಕೂತು …….ಮನೆಯಿಂದ ಗುಬ್ಬಿಮರಿಯ ಕರೆ ಬಂದಿತು..ಇದೆ ಗುಬ್ಬಿಮರಿ ನಾನು ಮನಸಾರೆ ಪ್ರೀತಿಸಿದ ಹುಡುಗಿ ಎಂಬುದು ತಿಳಿದಿರಲಿಲ್ಲ ಯಾರಿಗೂ ಕೂಡ. ಆಕಾಶ್ ಹೊರತು ಪಡಿಸಿ…ನಂತರ ರಾತ್ರಿ ರಾಜೇಶ್ ಗೆ ಶ್ರೀರಾಮ್ ಜೊತೆ ಇರಲು ಸ್ನೇಹ ಹೇಳಿ ಮಾಡಬೇಕಾದ ಕೆಲಸ ತಿಳಿಸಿ ಹೇಳಿದ್ದಳು…….ರಾಜೇಶ್ ಬಂದು ಕುಳಿತ…….ಸ್ನೇಹಿತರಿಗೆ ಅವನ ರೂಮಿಗೆ ಯಾವಾಗ ಬೇಕಾದರೂ ಬರುವ ಸಲುಗೆ ಅವರಲ್ಲಿ ಇತ್ತು….
ರಾಮ್ ಅವಳ ಬಗ್ಗೆ ಯೋಚನೆ ಮಾಡುತ್ತಾ…..ಸಂಕಟ ಪಡುತ್ತಿದ್ದ……..ರಾಮ್ ಗೆ ಸಲ್ಪ ಕೋಪ ಇದ್ದದ್ದು ಎಲ್ಲಾ ಸ್ನೇಹಿತರಿಗೂ ತಿಳಿದಿತ್ತು…ರಾಜೇಶ್ ಯಾಕೋ ರಾಮ್ ಅವಳನ್ನು ಮರೆತುಬಿಡೋ. ಆ ಮೊಸಗಾತಿಯ ಪ್ರೀತಿಗೆ ಮರುಳಾಗಿ ನಿನ್ನ ನೆಮ್ಮದಿ ಹಾಳು ಮಾಡ್ಕೊಬೇಡ ರಾಮ್……..ಪ್ಲೀಸ್ ಎಂದು ನಿಜಕ್ಕೂ ಅವನು ಸಂಕಟ ಪಟ್ಟ ಸ್ನೇಹ ಹೇಳಿ ಕಳುಹಿಸಿದ ಮಾತು ಮರೆತು…….ಅಷ್ಟು ಹೊತ್ತಿಗೆ ಸ್ನೇಹ ತೆಗೆದ್ದಿದ್ದ ಫೋಟೊಗಳನ್ನ ರಾಜೇಶ್ ಗೆ ಕಳುಹಿಸಿ ಕಾರ್ಯ ಸಾದಿಸಿದ್ದಳ್ಳು….ಆ ಫೋಟೋಸ್ ನೋಡಿ… ಶಾಕ್ ಆಗಿ……ರಾಮ್ ಗೆ ತೋರಿಸಿದನು….ನೋಡಿದ ರಾಮ್ ಗೆ ಇಂತ ಹುಡುಗಿ ನಾ ಪ್ರೀತಿ ಮಾಡಿ ಮೊಸ ಹೋದೆ ಎಂದು ಗೋಳಾಡಿದ…..ರಾಮ್ ಅವನನ್ನು ನೋಡಿ ಸಂಕಟ ಪಟ್ಟ ರಾಜೇಶ್……ಅವನು ಅವನಿಗೆ ಸಮಾಧಾನ ಮಾಡುತ್ತ ಕುಳಿತ………ಈ ಫೋಟೊಗಳನ್ನು ಬೇರೆ ಯಾರಿಗೂ ತೋರಿಸದಿರಲು…….ಸ್ನೇಹ ರಾಜೇಶ್ ಗೆ ತಿಳಿಸಿದಳು……ಕಾರಣ…….ಅವರ ಅಣ್ಣಾಂದಿರಿಗೆ ತಿಳಿದರೇ ಕೆಲಸ ಕೆಡುತ್ತೆ ಅನ್ನೋದು ಅವನಿಗೆ ತಿಳಿದಿತ್ತು…ಆಕಾಶ್ ಗೆ……
ಶ್ರೀರಾಮ್ ಗೆ ಆದ ಅನ್ಯಾಯ ಹರಿ ಮತ್ತು ಗಿರಿ ಗೂ ತಿಳಿಸಿದ ರಾಜೇಶ್……..ಇದನ್ನು ಕೇಳಿ ಅವರು ಸಂಕಟ ಪಟ್ಟು ಅವನಿಗೆ ಸಮಾಧಾನ ಮಾಡುತ್ತ ಭರವಸೆ ನೀಡಿದರು…..ಇನ್ನು ಯಾರ ಬದುಕಿನಲ್ಲು ಈ ರೀತಿ ಆಟ ಆಡಲು ಬಿಡಬಾರದು ಸರಿಯಾಗಿ ಬುದ್ದಿ ಕಲಿಸಬೇಕು ಅವಳಿಗೆ ಎಂದು ಎಲ್ಲರೂ ಪಣ ತೊಟ್ಟು ನಿಂತರು…ಅಷ್ಟರಲ್ಲಿ ಅವರಿಗೆ ಅಪ್ಪ ಕರೆ ಮಾಡಿ ಕೆಲಸ ನೀಡಿದ್ದರು…. ಆ ಮೋಸಗಾತಿ ಇವರ ತಂಗಿಯೇ ಎಂದು ತಿಳಿಯದ ಅಣ್ಣಾಂದಿರೆ ಅವಳ ಬಗ್ಗೆ ಕೆಟ್ಟದಾಗಿ ಮಾತಾಡ ತೊಡಗಿದರು….ಈ ವಿಷಯ ಮೈಥಿಲಿ ಗೂ ತಿಳಿಸಿ ನೋವು ಪಟ್ಟರು ಮೂವರೂ….. . ಅದು ನಾನೇ ಎಂದು ತಿಳಿಯದೆ ಮೈಥಿಲಿ ಕೂಡಾ ಆ ಹುಡುಗಿ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದಳು…….
ಅವರಿಗೆ ತಮ್ಮ ಭಾವ ಶ್ರೀರಾಮನೇ ಎಂದು ತಿಳಿಯದೆ…..ಅವನ ಹೆಸರು ಕೇಳದೇ ಮೈಥಿಲಿ ಪ್ರೀತಿಯ ವಿಷಯ ಹೇಳಿಕೊಂಡಿದ್ದಳು ರಾಮ್ ಬಳಿ ಅವನಿಗೂ ತಿಳಿದಿರಲಿಲ್ಲ…. …..ಅವಳ ಹೆಸರು ಗೊಂಬೆ ಎಂದು ಕಳೆಯುತ್ತಿದ್ದ……….ಅವಳನ್ನ…ಆಕೆ ಅಪ್ಪಟ ಚಿನ್ನ ಎಂದು ತಿಳಿಯದೆ ರಾಮ್ ಮಾಡಿದ ತಪ್ಪು ತಿಳಿಯಲಿಲ್ಲ….ಅವನಿಗೆ……..
ಅವರ ಸ್ನೇಹಿತರಿಗೆ ತಿಳಿದಿತ್ತು ಇವನು ಅವಳನ್ನು ಮರೆತು ಬದುಕಲು ಸಾಧ್ಯವಿಲ್ಲ ಎಂದು…..ಅದಕ್ಕಾಗಿ ಅವಳಿಗೂ ಪಾಠವಾಗಿ ಅವಳೆ ಇವನ ಸತಿ ಯಾಗಿ ಬರಬೇಕು ಎಂದು ಹರಿ ಗಿರಿ ಅವನ ಬಳಿಗೆ ಬಂದು ಮಾತನಾಡಿದರು…..ಅವನಿಗೆ ಈ ರೀತಿ ಮನಸ್ಸಾಗಲಿಲ್ಲ..ಆದರೂ ಇವರು ಇಬ್ಬರು ಬಲವಂತ ಮಾಡಿ,,,, ಮಾಡಿದ ಮೊಸ ನೆನಪಿರಲಿ…..ಅವಳು ಅಷ್ಟು ಮಾಡಿದರು ನಿನಗೆ ಬುದ್ದಿ ಇಲ್ಲ ಅಲ್ವಾ ಎಂದು ಹೇಳಿ….ಸುಮ್ಮನೆ ಆದರೂ….ಯೋಚನೆ ಮಾಡು ಎಂದು ಅಲ್ಲಿದ್ದ ಹೊರಟರು..
ಅವನು ಯೋಚನೆ ಮಾಡುತ್ತಾ ಕುತ್ತಿದ್ದ……..ದೊಡ್ಡಮನೆ ಯಿಂದ ಕರೆ ಬಂದಿತು..ಅವನ ಯೋಗಕ್ಷೇಮ ವಿಚಾರ ಮಾಡಲು…..ಅವನು ಯೋಚನೆ ಮಾಡಿದ…..ಮನೆಯವರಿಗೆ ತಿಳಿಯದೆ ನಾನು ಎಂದು………..ಗಾಬರಿಯಾಗಿ ನಿಂತ ಒಂದು ಕ್ಷಣ ಅವರನ್ನು ಮರೆತು ಯೋಚನೆ ಮಾಡಿದ…ತಪ್ಪಿಲ್ಲ ಅವಳಿಗೆ ಪಾಠವಾಗಿ ಒಳ್ಳೆಯ ದಾರಿಗೆ ತರುವುದು ತಪ್ಪಲ್ಲ ಎಂದು ಹರಿ ಗೆ ಪೋನ್ ಮಾಡಿದ…..ಬರಲು ಹೇಳಿದ……….ಹರಿ ಗಿರಿ ಗುಬ್ಬಿಮರಿ ಗೆ ತಿಳಿಸಿ ಹೊರಟರು….ರೂಮಿಗೆ ಬಂದು ಕುಳಿತು ….ಏನು ಯೋಚನೆ ಮಾಡದೆ ನೀನು ಅವಳಿಗೆ ತಾಳಿ ಕಟ್ಟಿ….ಊರಿಗೆ ಹೊರಡುವ ಯೋಜನೆ ತಿಳಿಸಿದರು….ನೀನು ಏನಾದರೂ ನನ್ನ ತಂಗಿ ನ ಪ್ರೀತಿ ಮಾಡಿದ್ದರೆ ನಾವು ಸಂತೋಷದಿಂದ ಮದುವೆ ಮಾಡಿ ಕೊಡುತ್ತೀದ್ದವು ಅಷ್ಟು ಒಳ್ಳೆಯ ಹುಡುಗ ನೀನು ನಿನ್ನ ಪ್ರೀತಿಗೆ ಮೋಸ ಮಾಡಲು ಬಂದರೆ ಸುಮ್ಮನೆ ಬಿಡುತ್ತಿವ ನಾವು ಎಂದರು ಹರಿ ಗಿರಿ ಇಬ್ಬರು….
ಅವನ ಕೈಗೆ ತಾಳಿ ಕೊಟ್ಟು ಅವಳಿಗೆ ಕಟ್ಟಿ ಬಿಡು ಎಂದರು ಇಬ್ಬರು…….ನಾವು ಹೇಳಿದ ಆಗೇ ಮಾಡು ಮುಂದಿನದ್ದು ನಾವು ನೋಡ್ಕೊತಿವಿ ಎಂದರು……ಅದು ತಪ್ಪು ಎಂದು ತಿಳಿದಿದ್ದರು ಅವರು ಕೋಪದಿಂದ ಈ ರೀತಿ ಮಾಡಿದರು…….ಅವರು ಹೇಳಿದ ಹಾಗೆ ಅವಳಿಗಾಗಿ ಕಾಯುತ್ತಾ ಕುಳಿತ ……..ಅವರಿಬ್ಬರೂ ಕೆಲಸ ಇದ್ದ ಕಾರಣ…….ಸಂಜೆ ಮನೆಗೆ ಹೋಗುವ ಸಮಯ ಅವಳ ಬಳಿಗೆ ಅವಳನ್ನು ಕಾಯುತ್ತಾ ಕುಳಿತಿದ್ದ ಅವನು…..ಅಲ್ಲೆ ಪಕ್ಕದಲ್ಲಿ ಇದ್ದ ಪಾಳು ಬಿದ್ದ ಮನೆಗೆ ಅವಳ ಕೈ ಹಿಡಿದು ಎಳೆದುಕೊಂಡು ಬಂದು ಒಂದು ಮಾತು ಆಡಲು ಬಿಡದೆ ಮಾತು ಶುರು ಮಾಡಿ. ಇನ್ನು ಮುಂದೆ ಆದರೂ ಸರಿಯಾದ ದಾರಿಯಲ್ಲಿ ಹೋಗು……ನಾನು ನಿನ್ನ ಮನಸಾರೆ ಪ್ರೀತಿಸಿದೇ ಆದರೆ ನಿನ್ನ ಬಗ್ಗೆ ತೂ ನೆನೆಸಿ ಕೊಳ್ಳಲು ಆಗುತ್ತಿಲ್ಲ ನನಗೆ……ನನ್ನ ದೇವತೆ ನೀನು……ನಿನೇ ಬಂದು ವಿಷಯ ಹೇಳಿದಾಗ ಎಷ್ಟೋ ಸಂತೋಷ ಪಟ್ಟಿದ್ದೆ ಗೊತ್ತಾ ಎಂದು ಕೂಡಲೇ ಮಳೆ ಬಿಟ್ಟು ಬಿಡದೆ ಶುರುವಾಹಿತು…. ಹುಡುಗಿಗೆ ಯಾವುದು ಅರ್ಥವಾಗದೆ ನಿಂತಿತ್ತು…..ಅವಳು ಕೂಡ ಅವನನ್ನು ಮನಸಾರೆಯೇ ಅಲ್ಲವೇ ಪ್ರೀತಿ ಮಾಡಿದ್ದು………ಅವನು ಕೈ ಹಿಡಿದಿದ್ದಕ್ಕೆ ನೋವು ಇದ್ದರೂ ನಿಂತು ಅವನನ್ನೇ ನೊಡುತ್ತ ಇದ್ದರೆ…….ಅವನ ಮಾತು ಇನ್ನ ಮುಗಿದಿರಲ್ಲಿಲ್ಲ.....ನನ್ನ ಪ್ರೀತಿಗೆ ಮೋಸ ಮಾಡಿದೇ ಎಂದಾಗ….ಒಮ್ಮೆ ಗಾಬರಿಯಾಗಿ ನಿಂತು…ಏನು ಎಂಬಂತೆ ಅವನನ್ನು ನೋಡಿದಳು……ನನ್ನ ಕ್ಷಮಿಸು….ಎಂದನು……ಪ್ರೀತಿಯಿಂದ…ಆದರೆ…ಕೋಪ ತುಂಬಿತ್ತು ಮುಖದಲ್ಲಿ………ಅವಳ ಕಪಾಳಕ್ಕೆ ಜೋರಾಗಿ ಬಿಸಿದ ರಭಸಕ್ಕೆ ತಲೆ ತಿರುಗಿ ಬಿದ್ದಳು………ಎಚ್ಚರಿಸಿದ ಆದರೆ ಮೇಲೆ ಹೇಳಲಿಲ್ಲ…….ಹುಡುಗಿ ಮತ್ತೆ ಅವಳ ಮುಗ್ಧ ಮುಖ ನೋಡಿ ಬೇಡ ಅನಿಸಿದರು……..ಜೇಬಿಗೆ ಕೈ ಹಾಕಿ ಹರಿ ಗಿರಿ ಕೂಟ್ಟಿದ್ದ ತಾಳಿ ತೆಗೆದು ಕಣ್ಣು ಮುಚ್ಚಿ ಕಟ್ಟಿಯೇ ಬಿಟ್ಟು……...ಊರಿನ ಕಡೆಗೆ ಹೊರಟ ಅವರು ಹೇಳಿದ ಹಾಗೆ…….ಅವಳಿಗೆ ಎಚ್ಚರವಿರಲಿಲ್ಲ……ಅವರು ಹೇಳಿದ ಆಗೆ ಅವಳು ಆಚೆ ಬರದ ಆಗೆ ಬೀಗ ಜಡಿದು ಹೋಗಿದ್ದ……ಕೆಲಸದ ಒತ್ತಡದಲ್ಲಿ ಗುಬ್ಬಿಮರಿಯ ಯೋಚನೆ ಮರೆತ್ತಿದ್ದರು…ಇಬ್ಬರು……..
ಬೆಳಗ್ಗೆ ಬೇಗ ಎದ್ದು ಆ ಹುಡುಗಿಯನ್ನು ನೋಡಲು ಹೊರಟರು ಎಲ್ಲಾ ಸ್ನೇಹಿತರಿಗೂ ಕರೆ ಮಾಡಿ ಬರಲು ಹೇಳಿದನು…..ರಾಮ್ ಆಲೇ ಊರು ತಲುಪಿದ್ದ…. ಹರಿ ಗಿರಿ ಅಲ್ಲಿಗೆ ಬಂದರು…..ಮೈಥಿಲಿಗೆ ಅವರು ಬಾಗಿಲು ತೆಗೆದ ಸದ್ದಿಗೆ ಎಚ್ಚರವಾಗಿತ್ತು….ಅವರು ಒಳಗೆ ಬಂದು ನಿಂತರು ತಮ್ಮ ಪ್ರೀತಿ ಗುಬ್ಬಿಮರಿ ಇಲ್ಲೆ ಇದ್ದಳೆ ಅನಿಸಿದ್ದು ನಿಜ. ಆದರೆ ಅವಳು ಮನೆಯಲ್ಲಿ ಆರಾಮಾಗಿ ನಿದ್ದೆ ಮಾಡುತ್ತಿದ್ದಳೆ ಇಲ್ಲಿಗೆ ಯಾಕೆ ಬರುತ್ತಾಳೆ ಎಂದುಕೊಂಡ ಮುಂದೆ ಹೆಜ್ಜೆ ಇಟ್ಟರು ಒಟ್ಟಿಗೆ……..ಅಲ್ಲೆ ಮುಂದೆ ಸುಸ್ತಾಗಿ ಮಲಗಿದ್ದ ಹುಡುಗಿ ಕಂಡಳು……ಮುಂದೆ ಬಂದು ಅವಳಿಗೆ ಮಳೆಯಲ್ಲಿ ನೆನೆದು ಜ್ವರ ಬಂದಿತು……..ಮುಖ ನೋಡಿ ಗಾಬರಿಯಾಗಿ ಕಣ್ಣೀರು ಸುರಿಸುತ್ತ ಗಾಬರಿಯಾದರು……ಗುಬ್ಬಿಮರಿ ಎಂದರು ಜೋರಾಗಿ………ಅವಳಿಗೆ ಸ್ವಲ್ಪ ಎಚ್ಚರವಾಗಿ ಅಣ್ಣಾ ಎಂದು ಕೊರಳಿನಲ್ಲಿ ಏನೋ ಇರುವ ಹಾಗೆ ಭಾಸವಾಗಿ ನೋಡಿ ಗಾಬರಿಯಾಗಿ ತಾಳಿ ಎಂದು ಕಣ್ಣೀರು ಸುರಿಸುತ್ತ ಅಣ್ಣಾಂದಿರನ್ನು ತಬ್ಬಿ ಕಣ್ಣೀರು ಹಾಕಿದಳು………ಆಗ ಇಬ್ಬರು ತಲೆ ಚಚ್ಚಿಕೊಂಡು ನಮ್ಮಿಂದಲೇ ನಿನಗೆ ಹೀಗೆ ಆಗುವ ಹಾಗೆ ಆಯಿತಲ್ಲ ಎಂದು ಗೋಳಾಡಿ ಎಲ್ಲಾ ವಿಷಯ ತಿಳಿಸಿ ಸಂಕಟ ಪಟ್ಟರು..ಮೂವರೂ…ನಡಿ ಚಿನ್ನು ಮೊದಲ ಆಸ್ಪತ್ರೆಗೆ ಹೋಗೋಣ ಎಂದು ಕರೆದುಕೊಂಡು ಹೋದರು……ನಂತರ ಎಲ್ಲಾ ವಿಷಯ ತಿಳಿದ ಅವರಿಗೆ ಕುಟುಂಬದವರಿಗೆ ಈ ವಿಷಯ ತಿಳಿಯಬಾರದೆಂದು ಮಾತು ತೆಗೆದು ಕೊಂಡು………..ನಂತರದ ದಿನಗಳಲ್ಲಿ ತನ್ನ ವಿದ್ಯಾಭ್ಯಾಸಕೆಂದು ಬೇರೆ ದೇಶಕ್ಕೆ ಹೊರಟು ಹೋದಳು…..ಮನೆಯವರಿಗೆ ಇಷ್ಟ ಇಲ್ಲದಿದ್ದರು ಅವಳ ಖುಷಿಗಾಗಿ ಒಪ್ಪಿಗೆ ನೀಡಿದರು……..ಹೊರಟಳು ಅವನ ಮೇಲೆ ಇದ್ದ ಪ್ರೀತಿಯನ್ನು ಮರೆತು ರಾಮ್ ಐ ಎಟ್ ಯು ಎಂದು …ನಿನ್ನ ಲೈಫ್ ಲಾಗ್ ಕ್ಷಮಿಸಲ್ಲ ಎನ್ನುತ್ತೆ ಹೊರಟೇ ಹೋದಳು……..ಅಣ್ಣಾಂದಿರಂತು ಅವಳ ಸಂಕಟ ನೋಡಿ ಅವರು ಸಂಕಟ ಪಡುತ್ತಾ ಇದ್ದರು…..ದಿನಗಳು ಉರುಳಿದವು ಆದರೆ ರಾಮ್ ಗೆ ಕರೆ ಕೂಡ ಮಾಡಲು ಆಗುತ್ತಿರಲ್ಲಿಲ್ಲ.ಕಾರಣ ಮಲೆನಾಡಿನ ಕಡೆ ತುಂಬಾ ಮಳೆ ಇದ್ದ ಕಾರಣ………ಒಂದ್ ದಿನ ಶ್ರೀರಾಮ್ ಮೈಸೂರಿನ ಕಡೆ ಸ್ನೇಹಿತರನ್ನ ಬೇಟಿ ಮಾಡುವ ಸಲುವಾಗಿ …ಹರಿ ಗಿರಿ ಗೆ ಕರೆ ಮಾಡಿ ಸಿಗಲು ಮೆಸೇಜ್ ಮಾಡಿದ್ದ………ಮೊದಲೆ ಬಂದು ಕಾಯುತ್ತಾ ಕುಳಿತಿದ್ದರು …..ಅವನು ಬಂದ ಕೂಡಲೇ ಹೇ ರಾಮ್ ಎಂತಹ ಕೆಲಸ ಮಾಡಿದೊ ನೀನು ಎಂದಾಗ ……ಜೊತೆ ಇದ್ದ ಎಲ್ಲರೂ ಗಾಬರಿಯಾದರು………ಅವರಿಗೆ ವಿಷಯ ತಿಳಿಯಿತು .ನನ್ನ ಗುಬ್ಬಿಮರಿ ಕಣೋ ಅವಳು ಎಂದು ಎಲ್ಲ ವಿಷಯ ತಿಳಿಸಿದರು ಹಾಗ ಅವನು ಕುಸಿದು ಬಿದ್ದ……ರಾಜೇಶ್ ಮಾಡಿದ ಕೆಲಸ ಹೊರ ಬಿತ್ತು……ಕುಸಿದು ಬಿದ್ದ ಅವನನ್ನು…….ನೋಡಿ ಎಷ್ಟು ಸಲ ಕಾಲ್ ಮಾಡಿದರೂ ನೀನು ಒಂದು ಪ್ರತಿಕ್ರಿಯೆ ಕೂಡ ಕೊಡಲಿಲ್ಲ….ನಮ್ಮ ಮಾತು ಕೇಳದೆ ನಮ್ಮ ಮುದ್ದು ತಂಗಿ ಗುಬ್ಬಿಮರಿ ಈ ನೋವು ಮರೆಯಲು ಬೇರೆ ದೇಶಕ್ಕೆ ಹೊರಟು ಹೋದಳು…….ಎಂದು ಗೋಳಾಡಿದ ಹರಿ…..
Image by Adina Voicu from Pixabay
ರಾಮ್ ಎಲ್ಲಿ ಇದ್ದಳೋ ನನ್ನ ದೇವತೆ ಯಾರದ್ದೊ ಮಾತು ಕೇಳಿ ಅವಳನ್ನು ಅನುಮಾನಿಸಿದೇ ನಾನು ಪಾಪಿ ಎಂದು ಗೋಳಾಡಿದ ರಾಮ್………ಆಗ ಅವರು ಎಲ್ಲಿದ್ದೀನಿ ನಾನು ಎಂದು ನಿನಗೆ ತಿಳಿಯುವಂತಿಲ್ಲ ಎಂದು ಮಾತು ತೆಗೆದು ಕೊಂಡಳು ಎಂದು ಕಣ್ಣೀರು ಹಾಕಿದರು…….ರಾಮ್ ಪ್ರೀತಿ ನಿಜವಾದದ್ದು ತಪ್ಪು ನಮ್ಮದು ಎಂದು ಹೇಳಿದರು ಕೇಳದೆ ಹೊರಟು ಹೋದಳು……ಎಂದರು……ನಮ್ಮ ಗುಬ್ಬಿಮರಿಯ ಮನ ಒಲಿಸಲು ಪ್ರಯತ್ನ ನಾವು ಪಡುತ್ತೇವೆ ಆದರೆ ಇದನ್ನು ಮರೆಯಲು ಅವಳಿಗೆ ಸಮಯ ಬೇಕು ಎಂದು ಅಲ್ಲಿದ್ದ ಹೊರಡರು….. ರಾಮ್ ಮಾಡಿದ ತಪ್ಪು ಅರಿವಾಗಿ ತನಗೆ ತಾನೆ ಶಿಕ್ಷೆ ಕೊಟ್ಟುಕೊಳ್ಳುತ್ತಿದ್ದ…..
ವರ್ಷ ಕಳೆದು ಹೋಗಿದೆ ….ಆದರೆ ನೋವು ಮಾತ್ರ ಮಾಸಿಲ್ಲ….ಅವನಿಗೆ ಮದುವೆ ಮಾಡಲು ಎಷ್ಟೋ ಪ್ರಯತ್ನಗಳು ನಡೆದಿದ್ದವು ಒಪ್ಪಿಗೆ ಸಿಕ್ಕಿರಲಿಲ್ಲ ಅವನಿಂದ….ಮನೆಯವರ ಕಣ್ಣೀರಿಗೆ ಕರಗಿ ಒಪ್ಪಿಗೆ ನೀಡಿದ್ದ……..ಅವಳನ್ನ ಮರೆಯಲು ಸಾಧ್ಯವೇ….ತಾಳಿ ಕಟ್ಟಿ ನೋವು ಕೊಟ್ಟು ಬಂದೆ ನಾನು ಪಾಪಿ ಅಂತ ಕಣ್ಣೀರಿಟ್ಟನು…….ಅವನು ಮದುವೆಗೆ ಒಪ್ಪಿಗೆ ನೀಡಿರುವ ವಿಷಯ ತಿಳಿದ ಹರಿ ಗಿರಿ……..ಅವನ ಜೊತೆ ಇದ್ದ ಸ್ನೇಹವನ್ನೆ ತ್ಯಜಿಸೀ ಬಿಟ್ಟರು.ಅವಳಿಗೂ ಮದುವೆ ಮಾಡಲು ಮುಂದಾಗಿ…………ಕುಟುಂಬದ ಜೊತೆಗೆ ಮಾತನಾಡಿದರು ಅವರು ಒಪ್ಪಿಗೆ ನೀಡಿ …. ಆಕಾಶ್ ಬಾಲ್ಯದಿಂದ ನಮ್ಮ ಗುಬ್ಬಿಮರಿ ಜೊತೆ ಆಡಿ ಬೆಳೆದ ಹುಡುಗ ಎಂದು ಅವನ ಬಳಿ ಮಾತನಾಡಿ ಎಲ್ಲಾ ತಯಾರಿ ಮಾಡಿಕೊಂಡು ಅವಳಿಗೆ ಶ್ರೀ ಬೇರೆ ಮದುವೆ ಆಗಲು ಒಪ್ಪಿಗೆ ನೀಡಿದ್ದನೇ ಎಂದಾಗ ಮತ್ತೆ ಸಂಕಟಪಟ್ಟಳು…….ಅವಳು ಒಪ್ಪಿಗೆ ನೀಡಿದಳು…..ಇನ್ನು ಮುಂದೆ ಆಗಿದ್ದು ನಿಮಗೆ ಮೊದಲೇ ತಿಳಿದಿದೆ…ಇದೆ ನೊವಲ್ಲಿ ಇಬ್ಬರು ಒಂದಾಗಿ……ಎರಡು ಕುಟುಂಬದವರು ಖುಷಿಯಾಗಿ ಮುಂದೆ ಸಾಗುತ್ತಾರೆ …
ಇದು ಸರಿಯೇ………ಯಾರದ್ದೊ ಮಾತು ಕೇಳಿ…ತಾಳಿ ಕಟ್ಟಿ ಬಿಟ್ಟು ಬಂದ ರಾಮ್ ಮಾಡಿದ್ದು….ಅಲ್ಲದೇ…..ಅಣ್ಣಾಂದಿರು ಕೊಟ್ಟ ಸಲಹೆಯಿಂದ ಎಷ್ಟು ಜನ ನೋವು ತಿನ್ನುವ ರೀತಿ ಆಗುತ್ತೆ ನೀವೇ ನೋಡಿದ್ದೀರಾ … ಅಲ್ವಾ…ನೀವು ಅಷ್ಟೆ ಪ್ರೀತಿ ಯ ವಿಷಯ ಅಷ್ಟೆ ಅಲ್ಲ…ನಾವು ಇನ್ನೊಬ್ಬರಿಗೆ ನೀಡುವ ಕೆಲವು ಸಲಹೆಗಳು ನಮ್ಮ ಬದುಕನ್ನೇ ನರಕಕ್ಕೆ ತಳ್ಳುತ್ತದೆ…….ನಮ್ಮ ಸ್ವಂತ ಆಲೋಚನೆಗಳಿಂದ ಮುಂದುವರೆಯುವುದು ಒಳಿತು ಅಲ್ವಾ….
ರಾಮ್ ವಿಮರ್ಶೆ ಮಾಡಿ ಮುಂದೆ ಹೋಗಬಹುದಿತ್ತು ಆದರೆ ಈ ನನ್ನ ಆಲೋಚನೆ ಬೇಡ ಇದು ಕಲ್ಪನೆ ಅಲ್ಲವೇ…….ಎಂದಿತು….
ಧನ್ಯವಾದಗಳು ಈ ನನ್ನ ಕಥೆ ಬರಿ ಕಾಲ್ಪನಿಕ ವಾಗಿದ್ದು ತಪ್ಪಿದ್ದಲ್ಲಿ ಮನ್ನಿಸಿ ….