Image by Alexas_Fotos from Pixabay 

ನಮ್ಮ ಜೀವನದ ಮುಖ್ಯ ಘಟ್ಟವು ಹೌದು… ಬನ್ನಿ ಮುಂದೆ ಓದಿ ನಿಮಗೂ ತಿಳಿಯುತ್ತೆ …..

ಸೋಲು ಕಣ್ಮುಂದೆ ಇದೆ ಅಂದರೆ ಗೆಲುವು ನಿನ್ನ ಬೆನ್ನಿದೆ ಇದೆ ಅನ್ನೋದು ನಾವು ಮರೆಯಬಾರದು ಅಲ್ವಾ… ಸೋಲಿಗೆ ಹೆದರಿ ಸಾಯಬೇಡ, ಗೆದ್ದೆ ಅಂತ ತುಂಬಾ ಖುಷಿನು ಪಡಬೇಡ, ಏನೇ ಆದರೂ ಹತಾಶಭಾವ ತೊರಬೇಡ, ಸೋಲೆಂದು ಶಿಕ್ಷೆ ಅಲ್ಲ, ಗೆಲುವೆಂದು ರಕ್ಷೆ ಅಲ್ಲ ನೆನಪಿರಲಿ…..

ಹೋರಾಟದ ಬದುಕು ಯಾವುದು ಶಾಶ್ವತ ಅಲ್ಲ, ನೀ ಕಂಡ ಸೋಲುಗಳು ಜೀವನದಲ್ಲಿ ಪಾಠಗಳಾಗಿ ಸ್ಪೂರ್ತಿ ತುಂಬುವ ಸಮಯ ಬಂದೇ ಬರುತ್ತೆ ತಾಳ್ಮೆ ಬೇಕಷ್ಟೆ…

ನೀ ಸೋತು ಕೂತಾಗ ಎಷ್ಟೋ ಜನ ನಿನ್ನ ಯೋಗ್ಯತೆ ಬಗ್ಗೆ ಕೂಡಾ ಮಾತು ಆಡುತ್ತಾರೆ…. ಅಂತವರಿಗೇನು ಕಡಿಮೆ ಇಲ್ಲ…. ಬಿಡಿ…!!!!

ಯಾರೇ ನಿಮ್ ಮೇಲೆ ಸಂದೇಹ ಪಟ್ಟರು ನೀ ಮಾತ್ರ ಬೇಜರ್ ಆಗೋಕೆ ಹೋಗ್ ಬೇಡ… ದೊಡ್ಡೊರು ಹೇಳಿಲ್ವಾ ಜನ ಪರೀಕ್ಷೆ ಮಾಡೋದು ಚಿನ್ನನ ಕಬ್ಬಿಣ ನ ಅಲ್ಲ….. ಇದನ್ನರಿತು ಬದುಕುವ ಕಲೆ ನಮ್ಮಲ್ಲಿರಬೇಕು….

ಯಾವುದನ್ನು ಕೇವಲವಾಗಿ ಕಾಣಬಾರದು…. ಕಾಗೆನ ಅಪಶಕುನ ಅಂತಾರೇ…ಆದರೆ ಒಂದಲ್ಲಾ ಒಂದು ದಿನ ಅದೇ ಕಾಗೆಗಾಗಿ ಕಾಯಬೇಕಾದ ಪರಿಸ್ಥಿತಿ ಬರುತ್ತೆ ಅಲ್ವಾ ಕೇಳೋಕೆ ಕಹಿ ಆದ್ರೂ ಸತ್ಯ..

ಸೋತೆ ಅಂತ ನೋವು ಪಟ್ಟರೇ ನಷ್ಟ ನಿಮ್ಮಿಗೆ ಮಾತ್ರ… ಈ ನೋವು ಸಾವು ಎರಡಕ್ಕೂ ಒಂದ್ ಪದ ಅಷ್ಟೆ ವ್ಯತ್ಯಾಸ… ಈ ಸಾವು ಒಂದೇ ಸಲ ಸಾಯಿಸುತ್ತೆ ಆದರೆ ನೋವು ಪ್ರತಿ ಕ್ಷಣ ಕೊಲ್ಲುತ್ತೆ.. SO BE STRONG… ಜನ ನಮ್ಮನ್ನ ಕುಗ್ಗಿಸೋಕೆ ನೂರು ತರ ಮಾತುಗಳನ್ನ ಆಡುತ್ತಾರೆ…. ಆದ್ರೆ ನಾವು ಕುಗ್ಗಿ ಹೋಗದೆ STRONG ಆಗಿ ನಿಂತು ಅವರತ್ರನೇ SALUTE ಹೊಡೆಸಿಕೊಳ್ಳುವ ತರ ಬದುಕಿ ತೋರಿಸಬೇಕು LATE ಆದ್ರು ಪರವಾಗಿಲ್ಲ….

ಕಾಯಬೇಕು ನಾವು ಸಮಯಕ್ಕಾಗಿ ಎದೆಯೊಳಗಿನ ಬೆಂಕಿ ದೀಪವಾಗಿ ಬದಲಾಗಿ ಬೆಳಗುವ ತನಕ ಕಾಯಬೇಕು ,,,ಆ ಬೆಂಕಿ ನಮ್ಮನ್ನ ಸ್ವಲ್ಪ ಸ್ವಲ್ಪವೇ ಕೊಲ್ಲೊದಕ್ಕಿಂತ ಮುಂಚೆ ನಾವೇ ಎಚ್ಚರವಾಗಬೇಕು…..ಇಲ್ಲದಿದ್ದರೆ ಆ ಬೆಂಕಿ ಬಳಸಿಕೊಂಡು ಎಷ್ಟೋ ಜನ ತಮ್ಮ ಬೇಳೆ ಬೇಯಿಸಿಕ್ಕೊಳ್ಳುತ್ತಾರೆ…..

ಬರಿ ಬೇಯಿಸಿಕೊಂಡರೇ ಪರವಾಗಿಲ್ಲ ನಮ್ಮ ಮನೆಯ ದೀಪವನ್ನೇ ಆರಿಸಿ ತಮಾಷೆ ನೋಡುವವರೆ ಹೆಚ್ಚು ಮಂದಿ ಇಲ್ಲಿ ನೆನಪಿರಲಿ…

ಕೆಟ್ಟ ಕೆಲಸಗಳನ್ನ ಮಾಡಬೇಡಿ,,,,,ಒಳ್ಳೆಯ ಕೆಲಸ ಮಾಡೋಕೆ ಹೆದರಿ ಕೂರಬೇಡಿ… ನೀನೆ ಮೇಲೆ ಎದ್ದು ನಿಲ್ಲಬೇಕು ಇಲ್ಲಿ… ಯಾರು ಸಹಾಯ ಮಾಡೋರು ಇಲ್ಲ … ನೀನು ಎದ್ದು ಗೆಲ್ಲೋ ತನಕ … ಗೆದ್ದಾಗ ಬಂದು ಕೈ ಕುಲುಕುವ ಜನರಿಲ್ಲಿ ನೆನಪಿರಲಿ…

ಗುರು ನಿನ್ ಬಳಿ ಹಣ ಇದ್ರೆ ಜನ PLAN ಮಾಡಿ ಕಳ್ಳತನ ಮಾಡುತ್ತಾರೆ ಇದಕ್ಕೆ ಅನುಮಾನ ಇಲ್ಲ…. ಆದ್ರೆ ನಿನ್ನಲ್ಲಿ ವಿದ್ಯೆ,ತಿಳುವಳಿಕೆ, ಜ್ಞಾನ,ಒಳ್ಳೆಯ ಗುಣ ಇದ್ರೆ ಕಳ್ಳತನ ಮಾಡೋಕೆ ಸಾಧ್ಯವಿಲ್ಲ ಅಲ್ವಾ… SO ಇವುಗಳನ್ನ ಸಂಪಾದನೆ ಮಾಡೋಕೆ ಹೆಚ್ಚು ಗಮನ ಕೊಡಬೇಕಾಗುತ್ತೆ ನಾವುಗಳು ಅಲ್ವಾ …

ಕೊನೆಯದಾಗಿ ಸೋಲು ಅಂದ್ರೆ ಸಾಲುಗಳಲ್ಲಿ ಇರುವ ಮರಗಳಂತೆ, ಒಮ್ಮೆ ಸೋತರೆ ಅಲ್ಲಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಂಡು ಮುಂದೆ ಸಾಗುವುದು ನಿಜವಾದ ಜೀವನ… ಅದೇ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾ ಕೂತರೇ ಇದ್ದಲ್ಲೆ ಇರ ಬೇಕಾಗುತ್ತೆ… ಅನ್ನೋದು ನನ್ನ ಅನಿಸಿಕೆ…ಇನ್ನ ಒಂದ್ ಮಾತು…

ಜೀವನ ಅಂದ್ರೆ ಆ ಬ್ರಹ್ಮ ಕೊಟ್ಟಿರೊ ಕಿತ್ತೊಗಿರೋ ಅವಸ್ಥೆ ಅಂತ ಅನ್ಸುತ್ತೆ….

ಆದ್ರೆ ಅದನ್ನ ಸರಿ ಮಾಡಿಕೊಂಡು ಬದುಕುವ ವ್ಯವಸ್ಥೆ ಕೂಡಾ ಆ ಬ್ರಹ್ಮ ಮಾಡಿ ಕೊಟ್ಟಿರ್ತ್ತಾರೆ…. ಅದನ್ನ ನಾವು ಹುಡುಕಿ ಸರಿ ಪಡಿಸಿಕೊಂಡು ಮುಂದೆ ಸಾಗುಬೇಕಷ್ಟೆ …. ನೆನಪಿರಲಿ.

.    .    .

Discus